ಐಎಂಎ ಹಗರಣದಲ್ಲಿ ಸಿದ್ದರಾಮಯ್ಯ ಕೂಡ ಫಲಾನುಭವಿ ಎಂದ ಬಸನಗೌಡ ಪಾಟೀಲ್ ಯತ್ನಾಳ್
ಕಾಂಗ್ರೆಸ್ ನಾಯಕರಿಗೆ ಮುಸಲ್ಮಾನರ ಬಗ್ಗೆ ಕಾಳಜಿ ಇಲ್ಲ, ಹಿಂದೆ ಐಎಂಎ ಹಗರಣದ ರೂವಾರಿಯು ಬಡ ಮುಸಲ್ಮಾನರಿಗೆ ಕೋಟ್ಯಾಂತರ ಹಣ ವಂಚಿಸಿ ಸಿಕ್ಕಿಬಿದ್ದಾಗ ಸಿದ್ದರಾಮಯ್ಯ ₹ 5 ಕೋಟಿ, ರೋಷನ್ ಬೇಗ್ಗೆ ₹8 ಕೋಟಿ, ಈಗಿನ ಗೃಹಮಂತ್ರಿಗೆ ₹ 2ಕೋಟಿ ಮತ್ತು ಜಮೀರ್ ಅಹ್ಮದ್ ಸುಮಾರು ₹50 ಕೋಟಿ ಸಂದಾಯ ಮಾಡಿದನೆಂದು ಯತ್ನಾಳ್ ಹೇಳಿದರು.
ವಿಜಯಪುರ: ವಿಜಯಪುರದಲ್ಲಿ ವಕ್ಫ್ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ಭಾಗವಹಿಸಿ ಮಾತಾಡಿದ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜಿಲ್ಲೆಯಲ್ಲಿ ವಕ್ಫ್ ಮಂಡಳಿಗೆ ಸೇರಿದ ಜಮೀನು 11,000 ಎಕರೆ ಇದೆ ಎಂದಿರುವ ಸಚಿವ ಜಮೀರ್ ಅಹ್ಮದ್ರನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ಸಲ ವಿಜಯಪುರದಿಂದ ಮುಸಲ್ಮಾನ ಶಾಸಕ ಅಂತ ಹೇಳಿರುವ ಜಮೀರ್ ಅವರು ತಾಕತ್ತಿದ್ದರೆ ತಾನೇ ಬಂದು ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ಯತ್ನಾಳ್ ಸವಾಲೆಸೆದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Yatnal vs Muslim Leaders: ಅವರ ಅಪ್ಪನಿಗೆ ಯಾರಾದರು ಹುಟ್ಟಿರುವವರು ಸಿಡಿ ಬಿಡುಗಡೆ ಮಾಡಲಿ: ಯತ್ನಾಳ್ ಸವಾಲ್
Latest Videos