‘ಇವರ ಅಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ’: ಜಗದೀಶ್​ಗೆ ಚೈತ್ರಾ ಕ್ಲಾಸ್

‘ಇವರ ಅಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ’: ಜಗದೀಶ್​ಗೆ ಚೈತ್ರಾ ಕ್ಲಾಸ್

ಮದನ್​ ಕುಮಾರ್​
|

Updated on: Oct 15, 2024 | 6:16 PM

ಚೈತ್ರಾ ಕುಂದಾಪುರ ಮೇಲೆ ಕೇಸ್​ ಆಗಿದ್ದು ಗೊತ್ತೇ ಇದೆ. ಆ ಪ್ರಕರಣಗಳ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿ ಜಗದೀಶ್​ ಮಾತನಾಡಿದ್ದಕ್ಕೆ ಚೈತ್ರಾ ಗರಂ ಆಗಿದ್ದಾರೆ. ಇಬ್ಬರ ನಡುವೆ ಭಾರಿ ಜಗಳ ನಡೆದಿದೆ. ಜಗಳ ಮಾಡುವ ಭರದಲ್ಲಿ ಚೈತ್ರಾ ಕುಂದಾಪುರ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ಇದಕ್ಕೆ ಜಗದೀಶ್​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

‘ಚೈತ್ರಾ ಏನು ಮಾತಾಡ್ತಾಳೆ. ಆಕೆಗೆ ಇರುವ ರೀತಿ ನನಗೂ ಫಾಲೋವರ್ಸ್​ ಇದ್ದಾರೆ. ಆಕೆಯ ಮೇಲೆ 28 ಕೇಸ್ ಇದೆ’ ಎಂದು ಜಗದೀಶ್​ ಹೇಳಿದ್ದಾರೆ. ‘ತಾಕತ್ತಿದ್ದರೆ ಎದುರು ಬಂದು ನಿಂತು ಮಾತನಾಡು. ನನ್ನ ಕೇಸ್​ ಬಗ್ಗೆ ಮಾತನಾಡುವ ಯಾವ ಯೋಗ್ಯತೆಯೂ ಇಲ್ಲ. 50 ಅಲ್ಲ, 100 ಕೇಸ್​ ಬೇಕಾದರೂ ಹಾಕಿಸಿಕೊಳ್ತೀನಿ. ಇವರ ಅಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ. ಯಾವಾನಾದ್ರೂ ಅಪ್ಪನಿಗೇ ಹೊಟ್ಟಿದ್ರೆ ನನ್ನ ಕೇಸ್​ ಬಗ್ಗೆ ನನ್ನ ಎದುರು ಬಂದು ಮಾತನಾಡಲಿ’ ಎಂದು ಚೈತ್ರಾ ಕುಂದಾಪುರ ಸವಾಲು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.