ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಯೋಗೇಶ್ವರ್ಗೆ ಶಿವಕುಮಾರ್ ಗಾಳ?
ಚನ್ನಪಟ್ಟಣದದಿಂದ ತಾನೇ ಕಾಂಗ್ರೆಸ್ ಅಭ್ಯರ್ಥಿ ಅನ್ನೋದನ್ನು ಶಿವಕುಮಾರ್ ಪುನರುಚ್ಛಿಸಿದರು. ಬಿಜೆಪಿಯ ಸಿಪಿ ಯೋಗೇಶ್ವರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಅಂತ ಹೇಳಿದಾಗ ಒಂದು ನಿಮಿಷ ಸುಮ್ಮನಾದ ಶಿವಕುಮಾರ್ ನಂತರ ಸಾವರಿಸಿಕೊಂಡು ಮಾಧ್ಯಮದವರ ಮಾತನ್ನು ನಂಬಲ್ಲ, ಕಾಯ್ದ್ದು ನೋಡುವ ನೀತಿ ಅನುಸರಿಸುತ್ತೇವೆ ಎಂದರು.
ಬೆಂಗಳೂರು: ನಗರದಲ್ಲಿ ಮಳೆ ಸುರಿಯುವುದು ಮುಂದುವರಿದಿದೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ಗೆ ಬಿಬಿಎಂಪಿಯ ವಾರ್ ರೂಮ್ ಈಗ ನೆನಪಾಗಿದೆ. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ವಿಧಾನಸಭಾ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದನ್ನು ಸ್ವಾಗತಿಸುತ್ತೇವೆ ಮತ್ತು ಮಳೆಯನ್ನೂ ಸ್ವಾಗತಿಸುತ್ತೇವೆ ಎಂದರು. ನಗರದಲ್ಲಿ ಮಳೆ ಮತ್ತು ಚರಂಡಿ ನೀರು ರಸ್ತೆ ಮೇಲೆ ಬಂದು ಜನ ಹಿಡಿಶಾಪ ಹಾಕುತ್ತಿದ್ದರೆ ಶಿವಕುಮಾರ್ ಮಳೆಯನ್ನು ಸ್ವಾಗತಿಸುತ್ತಿದ್ದಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Parenting Tips : ಪೋಷಕರೇ, ನೀವು ಈ ತಪ್ಪುಗಳನ್ನು ಮಾಡಿದ್ರೆ ಮಕ್ಕಳ ಭವಿಷ್ಯ ಹಾಳಾಗೊಂದು ಖಂಡಿತ
Latest Videos