ಶ್ರೀರಾಮುಲು ಮೂಲಕ ಜನಾರ್ಧನ ರೆಡ್ಡಿಯವರನ್ನು ಬಿಜೆಪಿಗೆ ವಾಪಸ್ಸು ತರುವ ಪ್ರಯತ್ನ ನಡೆದಿದೆ: ಗಾಲಿ ಸೋಮಶೇಖರ ರೆಡ್ಡಿ

|

Updated on: Jan 27, 2024 | 6:29 PM

ಜನಾರ್ಧನ ರೆಡ್ಡಿ ಅವರೊಂದಿಗೆ ವೈಯಕ್ತಿಕವಾಗಿ ಯಾವುದೇ ತಗಾದೆ ಇರಲಿಲ್ಲ ಆದರೆ, ಅವರು ಹೊಸ ಪಕ್ಷ ಕಟ್ಟಿದ್ದರಿಂದ ವೈಮನಸ್ಸು ಮೂಡಿತ್ತು ಎಂದು ಸೋಮಶೇಖರ ರೆಡ್ಡಿ ಹೇಳಿದರು. ಅವರು ಪಕ್ಷಕಟ್ಟಿ ಅಸೆಂಬ್ಲಿ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರಿಂದಲೇ ಬಿಜೆಪಿ ಸಾಕಷ್ಟು ಹಿನ್ನಡೆ ಉಂಟಾಯಿತು ಎಂಬ ಅಂಶವನ್ನು ಸೋಮಶೇಖರ್ ರೆಡ್ಡಿ ತಳ್ಳಿಹಾಕಿದರು.

ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಅವರನ್ನು ಪುನಃ ಬಿಜೆಪಿಗೆ ಕರೆದೊಯ್ಯುವ ಬಗ್ಗೆ ವದಂತಿಗಳು ದಟ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿಯ ಟಿವಿ9 ವರದಿಗಾರ ರೆಡ್ಡಿಯವರ ಸಹೋದರ ಆದರೆ ಬಿಜೆಪಿಯ ಶಾಸಕ ಗಾಲಿ ಸೋಮಶೇಖರ್ ರೆಡ್ಡಿಯವರನ್ನು (Gali Somashekhar Reddy) ಮಾತಾಡಿಸಿದ್ದಾರೆ. ಜನಾರ್ಧನ ರೆಡ್ಡಿಯವರನ್ನು ವಾಪಸ್ಸು ಕರೆಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ನಿಜ, ಅದನ್ನು ತಾನೂ ಮಾಧ್ಯಮಗಳಲ್ಲಿ ನೋಡಿದ್ದಾಗಿ ಸೋಮಶೇಖರ್ ರೆಡ್ಡಿ ಹೇಳಿದರು. ಅವರು ಪಕ್ಷಕ್ಕೆ ಹಿಂತಿರುಗಿದರೆ ರಾಜ್ಯದ ಉತ್ತರ ಭಾಗದಲ್ಲಿ ಬಿಜೆಪಿಯ ಶಕ್ತಿ ಹೆಚ್ಚುವುದು ಸತ್ಯ ಎಂದ ಅವರು ಜನಾರ್ಧನರೆಡ್ಡಿ ಬಾಲ್ಯದ ಗೆಳೆಯ ಬಿ ಶ್ರೀರಾಮುಲು (B Sriramulu) ಮೂಲಕ ಅವರನ್ನು ಘರ್ ವಾಪ್ಸಿ ಮಾಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಜನಾರ್ಧನ ರೆಡ್ಡಿ ಅವರೊಂದಿಗೆ ವೈಯಕ್ತಿಕವಾಗಿ ಯಾವುದೇ ತಗಾದೆ ಇರಲಿಲ್ಲ ಆದರೆ, ಅವರು ಹೊಸ ಪಕ್ಷ ಕಟ್ಟಿದ್ದರಿಂದ ವೈಮನಸ್ಸು ಮೂಡಿತ್ತು ಎಂದು ಸೋಮಶೇಖರ ರೆಡ್ಡಿ ಹೇಳಿದರು. ಅವರು ಪಕ್ಷಕಟ್ಟಿ ಅಸೆಂಬ್ಲಿ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರಿಂದಲೇ ಬಿಜೆಪಿ ಸಾಕಷ್ಟು ಹಿನ್ನಡೆ ಉಂಟಾಯಿತು ಎಂಬ ಅಂಶವನ್ನು ತಳ್ಳಿಹಾಕುವ ಸೋಮಶೇಖರ್ ರೆಡ್ಡಿ, ಅದು ಸ್ವಲ್ಪಮಟ್ಟಿಗೆ ಪ್ರಭಾವ ಬೀರಿದ್ದು ನಿಜ ಆದರೆ, ಕಾಂಗ್ರೆಸ್ ಪಕ್ಷ ನೀಡಿದ ಸುಳ್ಳು ಗ್ಯಾರಂಟಿಗಳು ಬಿಜೆಪಿಗೆ ಮುಳುವಾದವು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on