ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಬೇಕು ಅಂತ ಶೆಟ್ಟರ್ ಅಂದಿದ್ದಾರೆ ಅಂದಾಗ ಶಿವಕುಮಾರ್ ಏನಂದರು ಗೊತ್ತಾ?

ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಬೇಕು ಅಂತ ಶೆಟ್ಟರ್ ಅಂದಿದ್ದಾರೆ ಅಂದಾಗ ಶಿವಕುಮಾರ್ ಏನಂದರು ಗೊತ್ತಾ?

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 27, 2024 | 4:42 PM

ವಿಪಕ್ಷ ನಾಯಕನ ಆಯ್ಕೆ ನಡೆಯುವ ಮೊದಲು ಶೆಟ್ಟರ್, ಹೊಸ ಸರ್ಕಾರ ರಚನೆನಯಾಗಿ 7 ತಿಂಗಳಾದರೂ ಬಿಜೆಪಿ ನಾಯಕರಿಗೆ ಒಬ್ಬ ವಿರೋಧ ಪಕ್ಷನನ್ನು ಆಯ್ಕೆ ಮಾಡಿವುದು ಸಾಧ್ಯವಾಗಿಲ್ಲ ಅಂತ ಮೂದಲಿಸುತ್ತಿದ್ದರು. ಬಿಜೆಪಿಗೆ ವಾಪಸ್ಸು ಹೋದ ಕೇವಲ ಎರಡ ದಿನಗಳ ಬಳಿಕ ಅಂಥ ಟೀಕೆಗಳನ್ನು ಕಾಂಗ್ರೆಸ್ ಮತ್ತು ಅದರ ನಾಯಕರ ಮಾಡುತ್ತಿದ್ದಾರೆ.

ಬೆಂಗಳೂರು: ನಮ್ಮ ರಾಜಕಾರಣಿಗಳು ಎಷ್ಟು ಬೇಗ ಬಣ್ಣ ಬದಲಾಯಿಸುತ್ತಾರಲ್ಲಾ ಅಂತ ಆಶ್ಚರ್ಯವಾಗುತ್ತದೆ. ಮಾಜಿ ಮುಖ್ಯಮಂತ್ರಿ ಮತ್ತು ಈಗ ಪುನಃ ಬಿಜೆಪಿಯ ನಾಯಕನಾಗಿರುವ ಜಗದೀಶ್ ಶೆಟ್ಟರ್ (Jagadish Shettar) ಕಳೆದ ವಾರದವರೆಗೆ ಮಾಧ್ಯಮ ಪ್ರತಿನಿಧಿಗಳನ್ನು ತಮ್ಮ ಮನೆಗೆ ಕರೆದು ಬಿಜೆಪಿ ನಾಯಕರನ್ನು ತೆಗಳುತ್ತಿದ್ದರು. ಆರ್ ಅಶೋಕ್ (R Ashoka) ವಿರೋಧ ಪಕ್ಷದ ನಾಯಕನಾದಾಗ, ಬಿವೈ ವಿಜಯೇಂದ್ರ (BY Vijayendra) ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷನಾದಾಗ ಅವರ ಕಟು ಟೀಕೆಗಳನ್ನು ಮಾಡಿದ್ದರು. ವಿಪಕ್ಷ ನಾಯಕನ ಆಯ್ಕೆ ನಡೆಯುವ ಮೊದಲು ಅವರು ಹೊಸ ಸರ್ಕಾರ ರಚನೆನಯಾಗಿ 7 ತಿಂಗಳಾದರೂ ಬಿಜೆಪಿ ನಾಯಕರಿಗೆ ಒಬ್ಬ ವಿರೋಧ ಪಕ್ಷನನ್ನು ಆಯ್ಕೆ ಮಾಡಿವುದು ಸಾಧ್ಯವಾಗಿಲ್ಲ ಅಂತ ಮೂದಲಿಸುತ್ತಿದ್ದರು. ಬಿಜೆಪಿಗೆ ವಾಪಸ್ಸು ಹೋದ ಕೇವಲ ಎರಡ ದಿನಗಳ ಬಳಿಕ ಅಂಥ ಟೀಕೆಗಳನ್ನು ಕಾಂಗ್ರೆಸ್ ಮತ್ತು ಅದರ ನಾಯಕರ ಮಾಡುತ್ತಿದ್ದಾರೆ. ಇವತ್ತು ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಬೇಕು ಅಂದರಂತೆ. ಅದನ್ನು ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಿಳಿಸಿದಾಗ, ಶೆಟ್ಟರ್ ಅವರು ಇಲ್ಲಿದ್ದಾಲೂ ಹಾಗೆಯೇ ಮಾತಾಡುತ್ತಿದ್ದರು, ಬಿಜೆಪಿಯನ್ನು ನಿರ್ನಾಮಗೊಳಿಸಬೇಕು ಅನ್ನುತ್ತಿದ್ದರು ಎಂದು ನಗುತ್ತಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ