ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ

Updated on: Sep 26, 2026 | 4:45 PM

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣದ ಶಾಸಕ ಕುನಾಲ್ ಘೋಷ್ ಅವರ ಕಾರಿನ ಮೇಲೆ ಉದ್ರೇಕಿತ ಗುಂಪೊಂದು ಕಲ್ಲು ಹಾಗೂ ಮೊಟ್ಟೆಗಳಿಂದ ದಾಳಿ ನಡೆಸಿದೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ದಾಳಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಗೊಂಡ ಜನರು ಶಾಸಕರ ಕಾರನ್ನು ತಡೆದು, "ಕುನಾಲ್ ಘೋಷ್ ಗೋ ಬ್ಯಾಕ್" ಎಂದು ಘೋಷಣೆ ಕೂಗುತ್ತಾ ಕಾರಿನ ಮೇಲೆ ಕಲ್ಲು ಹಾಗೂ ಮೊಟ್ಟೆಗಳನ್ನು ತೂರಿದ್ದಾರೆ. ಇದರಿಂದಾಗಿ ಕುನಾಲ್ ಘೋಷ್ ಅವರು ರ್ಯಾಲಿಗೆ ಹೋಗಲಾಗದೆ ತಕ್ಷಣವೇ ಕೊಲ್ಕತಾಗೆ ಹಿಂತಿರುಗಬೇಕಾಯಿತು.

ಕೊಲ್ಕತ್ತಾ, ಸೆಪ್ಟೆಂಬರ್ 26: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣದ ಶಾಸಕ ಕುನಾಲ್ ಘೋಷ್ ಅವರ ಕಾರಿನ ಮೇಲೆ ಉದ್ರೇಕಿತ ಗುಂಪೊಂದು ಕಲ್ಲು ಹಾಗೂ ಮೊಟ್ಟೆಗಳಿಂದ ದಾಳಿ ನಡೆಸಿದೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ದಾಳಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಗೊಂಡ ಜನರು ಶಾಸಕರ ಕಾರನ್ನು ತಡೆದು, “ಕುನಾಲ್ ಘೋಷ್ ಗೋ ಬ್ಯಾಕ್” ಎಂದು ಘೋಷಣೆ ಕೂಗುತ್ತಾ ಕಾರಿನ ಮೇಲೆ ಕಲ್ಲು ಹಾಗೂ ಮೊಟ್ಟೆಗಳನ್ನು ತೂರಿದ್ದಾರೆ. ಇದರಿಂದಾಗಿ ಕುನಾಲ್ ಘೋಷ್ ಅವರು ರ್ಯಾಲಿಗೆ ಹೋಗಲಾಗದೆ ತಕ್ಷಣವೇ ಕೊಲ್ಕತಾಗೆ ಹಿಂತಿರುಗಬೇಕಾಯಿತು.

ತಮ್ಮ ಪಕ್ಷದ ನಾಯಕನ ಮೇಲಿನ ದಾಳಿಯನ್ನು ಖಂಡಿಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ನೇರ ವಾಗ್ದಾಳಿ ನಡೆಸಿದರು. “ಶ್ರೀರಾಮ್‌ಪುರದಲ್ಲಿ ನಡೆಯುತ್ತಿರುವ ನಮ್ಮ ಸಭೆಗೆ ಜನರು ತಲುಪದಂತೆ ಪೊಲೀಸರು ಮತ್ತು ಬಿಜೆಪಿ ಗೂಂಡಾಗಳು ತಡೆಯುತ್ತಿದ್ದಾರೆ. ಇಂತಹ ಘಟನೆಗಳು ಆಫ್ರಿಕನ್ ದೇಶಗಳಲ್ಲೂ ನಡೆಯುವುದಿಲ್ಲ” ಎಂದು ಕಿಡಿಕಾರಿದರು.

(Video Source: Kunal Ghosh)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More