IND vs ENG, ICC World Cup: ಭಾರತ ಗೆದ್ದ ಸಂದರ್ಭ ಏಕಾನ ಸ್ಟೇಡಿಯಂನಲ್ಲಿ ಸೆಲೆಬ್ರೇಷನ್ ಹೇಗಿತ್ತು ನೋಡಿ

|

Updated on: Oct 30, 2023 | 9:54 AM

India vs England, ICC Cricket World Cup 2023: ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಏಕಾನ ಸ್ಟೇಡಿಯಂನಲ್ಲಿ ಭರ್ಜರಿ ಸೆಲೆಬ್ರೇಷನ್ ಮಾಡಲಾಗಿದೆ. ಮೈದಾನದ ಲೈಟ್ ಅನ್ನು ಆಫ್ ಮಾಡಿ ಬಣ್ಣ ಬಣ್ಣಗಳ ಪಟಾಕಿಗಳ ಮಳೆ ಸುರಿಸಲಾಗಿದೆ. ಇದರ ನಡುವೆ ಲೇಸರ್ ಲೈಟ್ ಶೋ ಅಭಿಮಾನಿಗಳ ಖುಷಿಯನ್ನು ಮತ್ತಷ್ಟು ಹೆಚ್ಚಿಸಿತು.

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ (Team India) ಕ್ರಿಕೆಟ್ ತಂಡದ ಜಯದ ನಾಗಾಲೋಟ ಮುಂದುವರೆದಿದೆ. ಭಾನುವಾರ ಲಖನೌದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 100 ರನ್​ಗಳ ಅಮೋಘ ಗೆಲುವು ಕಂಡಿತು. ಆರಂಭಿಕ ಬ್ಯಾಟರ್​ಗಳ ವೈಫಲ್ಯದ ನಡುವೆಯೂ ನಾಯಕ ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಬೌಲರ್​ಗಳ ಸಂಘಟಿತ ಪ್ರದರ್ಶನದಿಂದ ಭಾರತಕ್ಕೆ ಜಯ ದಕ್ಕಿತು. ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಏಕಾನ ಸ್ಟೇಡಿಯಂನಲ್ಲಿ ಭರ್ಜರಿ ಸೆಲೆಬ್ರೇಷನ್ ಮಾಡಲಾಗಿದೆ. ಮೈದಾನದ ಲೈಟ್ ಅನ್ನು ಆಫ್ ಮಾಡಿ ಬಣ್ಣ ಬಣ್ಣಗಳ ಪಟಾಕಿಗಳ ಮಳೆ ಸುರಿಸಲಾಗಿದೆ. ಇದರ ನಡುವೆ ಲೇಸರ್ ಲೈಟ್ ಶೋ ಅಭಿಮಾನಿಗಳ ಖುಷಿಯನ್ನು ಮತ್ತಷ್ಟು ಹೆಚ್ಚಿಸಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 30, 2023 09:54 AM