ನಮಗೆ ಸರ್ಕಾರದ ಗ್ಯಾರಂಟಿಗಳು ಬೇಕಾಗಿಲ್ಲ, ಇರುಳ್ಳಿ ಬೆಲೆ ಕಡಿಮೆ ಮಾಡಿ ಎಂದ ಗೃಹಿಣಿ

ಬಾಗಲಕೋಟೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಗೆ 70-80 ರೂ.ಏರಿದೆ. ಹಿಂದೆ ಟೊಮ್ಯಾಟೋ ಬೆಲೆ ಏರಿತ್ತು, ಈಗ ಈರುಳ್ಳಿ ಬೆಲೆ ಹೆಚ್ಚಾಗಿದೆ. ಈ ಕುರಿತಾಗಿ ಜಿಲ್ಲೆಯ ವಲ್ಲಭಭಾಯಿ ವೃತ್ತದ ಬಳಿಯ ತರಕಾರಿ ಮಾರುಕಟ್ಟೆ ಟಿವಿ9 ಜೊತೆ ಓರ್ವ ಗೃಹಿಣಿ ಮಾತನಾಡಿದ್ದು,  ನಮಗೆ ಸರ್ಕಾರದ ಗ್ಯಾರಂಟಿಗಳು ಬೇಕಾಗಿಲ್ಲ,ಈರುಳ್ಳಿ ಬೆಲೆ ಕಡಿಮೆ ಆಗಲಿ. ಈರುಳ್ಳಿ ಬೆಲೆ ಏರಿಕೆಯಿಂದ ಅಡುಗೆ ಮಾಡಲು ಕಷ್ಟವಾಗುತ್ತಿದೆ ಎಂದಿದ್ದಾರೆ. 

ನಮಗೆ ಸರ್ಕಾರದ ಗ್ಯಾರಂಟಿಗಳು ಬೇಕಾಗಿಲ್ಲ, ಇರುಳ್ಳಿ ಬೆಲೆ ಕಡಿಮೆ ಮಾಡಿ ಎಂದ ಗೃಹಿಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 29, 2023 | 4:12 PM

ಬಾಗಲಕೋಟೆ, ಅಕ್ಟೋಬರ್​​​​ 29: ನಮಗೆ ಸರ್ಕಾರದ ಗ್ಯಾರಂಟಿಗಳು ಬೇಕಾಗಿಲ್ಲ, ಈರುಳ್ಳಿ (onion) ಬೆಲೆ ಕಡಿಮೆ ಆಗಲಿ. ಈರುಳ್ಳಿ ಬೆಲೆ ಏರಿಕೆಯಿಂದ ಅಡುಗೆ ಮಾಡಲು ಕಷ್ಟವಾಗುತ್ತಿದೆ ಎಂದು ಗೃಹಿಣಿ ಒಬ್ಬರು ತಮ್ಮ ಅಳಲು ತೊಡಿಕೊಂಡಿದ್ದಾರೆ. ಜಿಲ್ಲೆಯ ವಲ್ಲಭಭಾಯಿ ವೃತ್ತದ ಬಳಿಯ ತರಕಾರಿ ಮಾರುಕಟ್ಟೆ ಮಾತನಾಡಿದ ಅವರು, ಬಾಗಲಕೋಟೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಗೆ 70-80 ರೂ.ಏರಿದೆ. ಹಿಂದೆ ಟೊಮ್ಯಾಟೋ ಬೆಲೆ ಏರಿತ್ತು, ಈಗ ಈರುಳ್ಳಿ ಬೆಲೆ ಹೆಚ್ಚಾಗಿದೆ. ಈಗ ಅರ್ಧ ಹೆಚ್ಚಬೇಕೊ ಪೂರ್ಣ ಉಳ್ಳಾಗಡ್ಡಿ ಹೆಚ್ಚಬೇಕೊ ಗೊತ್ತಿಲ್ಲ. ಈರುಳ್ಳಿ ದರ ಹೆಚ್ಚಿದ್ದಕ್ಕೆ ಹೆಣ್ಣುಮಕ್ಕಳು ಕಣ್ಣೀರು ಹಾಕುವಂತಾಗಿದೆ. ಈರುಳ್ಳಿ ಪರ ರಾಜ್ಯದಿಂದ ಖರೀದಿಸಿ ರೇಟ್ ಕಡಿಮೆ ಮಾಡಬೇಕು. ಸರ್ಕಾರ ಕಿರಾಣಿ, ತರಕಾರಿ ಬೆಲೆ ‌ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Follow us