Loading video

IND vs ENG, ICC World Cup: ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಏಕಾನ ಸ್ಟೇಡಿಯಂ: ಹೇಗಿದೆ ನೋಡಿ

|

Updated on: Oct 27, 2023 | 11:31 AM

India vs England, ICC World Cup: ಇಂಡೋ-ಇಂಗ್ಲೆಂಡ್ ಹೈವೋಲ್ಟೇಜ್ ಪಂದ್ಯಕ್ಕೆ ಲಕ್ನೋದ ಏಕಾನ ಸ್ಟೇಡಿಯಂ ಭರ್ಜರಿ ಆಗಿ ತಯಾರಾಗುತ್ತಿದೆ. ಸ್ಟೇಡಿಯಂ ಹೊರಗಡೆಯ ವಿಡಿಯೋ ವೈರಲ್ ಆಗುತ್ತಿದ್ದು, ವಿವಿಧ ಬಣ್ಣಗಳ ದ್ವೀಪದಿಂದ ಸ್ಟೇಡಿಯಂ ಕಂಗೊಳಿಸುತ್ತಿದೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ವಿಶ್ವಕಪ್ ಪಂದ್ಯ ಅಕ್ಟೋಬರ್ 29 ರಂದು (ಭಾನುವಾರ) ಲಕ್ನೋದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇರಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಟೀಮ್ ಇಂಡಿಯಾ ಆಟಗಾರರು ಲಕ್ನೋಗೆ ತಲುಪಿದ್ದು, ಇಂದಿನಿಂದ ಅಭ್ಯಾಸ ಶುರುಮಾಡಲಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಪಂದ್ಯದ ಬಳಿಕ ಬಿಸಿಸಿಐ ಭಾರತದ ಆಟಗಾರರಿಗೆ ಕುಟುಂಬದವರೊಂದಿಗೆ ಸಮಯ ಕಳೆಯಲು ಎರಡು ದಿನಗಳ ವಿಶ್ರಾಂತಿ ನೀಡಿತ್ತು. ಇದನ್ನು ಮುಗಿಸಿ ರೋಹಿತ್ ಪಡೆ ಲಕ್ನೋದಲ್ಲಿ ಜೊತೆಯಾಗಿದ್ದಾರೆ. ಅತ್ತ ಇಂಗ್ಲೆಂಡ್ ಆಟಗಾರರು ಬೆಂಗಳೂರಿನಿಂದ ಲಕ್ನೋಗೆ ಹೊರಟಿದ್ದಾರೆ. ಇದೀಗ ಇಂಡೋ-ಇಂಗ್ಲೆಂಡ್ ಹೈವೋಲ್ಟೇಜ್ ಪಂದ್ಯಕ್ಕೆ ಲಕ್ನೋದ ಏಕಾನ ಸ್ಟೇಡಿಯಂ ಭರ್ಜರಿ ಆಗಿ ತಯಾರಾಗುತ್ತಿದೆ. ಸ್ಟೇಡಿಯಂ ಹೊರಗಡೆಯ ವಿಡಿಯೋ ವೈರಲ್ ಆಗುತ್ತಿದ್ದು, ವಿವಿಧ ಬಣ್ಣಗಳ ದ್ವೀಪದಿಂದ ಸ್ಟೇಡಿಯಂ ಕಂಗೊಳಿಸುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ