ಹುಲಿ ಉಗರು ವಿವಾದ: ಹುಲಿಯುಗುರು ಮನೆಗಳಲ್ಲಿಟ್ಟುಕೊಂಡವರನ್ನು ಬಂಧಿಸುತ್ತಾ ಹೋದರೆ ಜೈಲುಗಳು ಸಾಕಾಗಲ್ಲ: ಆರಗ ಜ್ಞಾನೇಂದ್ರ, ಶಾಸಕ

ಹುಲಿ ಉಗರು ವಿವಾದ: ಹುಲಿಯುಗುರು ಮನೆಗಳಲ್ಲಿಟ್ಟುಕೊಂಡವರನ್ನು ಬಂಧಿಸುತ್ತಾ ಹೋದರೆ ಜೈಲುಗಳು ಸಾಕಾಗಲ್ಲ: ಆರಗ ಜ್ಞಾನೇಂದ್ರ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 27, 2023 | 11:07 AM

ಟಿಪ್ಪು ಸುಲ್ತಾನ್ ಹುಲಿಯೊಂದನ್ನು ಕೊಲ್ಲುತ್ತಿರುವ ಪೋಟೋಗಳನ್ನು ಅನೇಕ ಜನ ತಮ್ಮ ಮನೆಗಳಲ್ಲಿ ತೂಗು ಹಾಕಿದ್ದಾರೆ. ಅದು ವನ್ಯಜೀವಿ ಸಂರಕ್ಷಣೆ ಕಾಯ್ದೆ ಉಲ್ಲಂಘನೆಯಲ್ಲವೇ? ಅದನ್ನು ನೋಡಿ ಬೇರೆ ಜನ ಹುಲಿಗಳನ್ನು ಬೇಟೆಯಾಡಲು ಮುಂದಾದರೆ ಹೇಗೆ? ಎಂದು ಅರಗ ಜ್ಞಾನೇಂದ್ರ ಪ್ರಶ್ನಿಸಿದರು.

ಶಿವಮೊಗ್ಗ: ಹುಲಿ ಉಗುರಿನ ಪೆಂಡೆಂಟ್ (tiger claw Pendant), ಡಾಲರ್ ಮತ್ತು ಲಾಕೆಟ್ ಧರಿಸಿದವರನ್ನು ಅಥವಾ ಮನೆಯಲ್ಲಿಟ್ಟುಕೊಂಡವರನ್ನು ಅರಣ್ಯಾಧಿಕಾರಿಗಳು ಬಂಧಿಸಿ ಜೈಲಿಗೆ ಕಳಿಸುತ್ತಿರುವ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಟಿಪ್ಪು ಸುಲ್ತಾನ್ ಹುಲಿಯೊಂದನ್ನು ಕೊಲ್ಲುತ್ತಿರುವ ಪೋಟೋಗಳನ್ನು ಅನೇಕ ಜನ ತಮ್ಮ ಮನೆಗಳಲ್ಲಿ ತೂಗು ಹಾಕಿದ್ದಾರೆ. ಅದು ವನ್ಯಜೀವಿ ಸಂರಕ್ಷಣೆ ಕಾಯ್ದೆ ಉಲ್ಲಂಘನೆಯಲ್ಲವೇ? ಅದನ್ನು ನೋಡಿ ಬೇರೆ ಜನ ಹುಲಿಗಳನ್ನು ಬೇಟೆಯಾಡಲು ಮುಂದಾದರೆ ಹೇಗೆ? ಎಂದು ಪ್ರಶ್ನಿಸಿದರು. ಕೆಲವರು ತಮಗೆ ತಿಳಿಯದೆ ಅಥವಾ ಪರಂಪರಾಗತವಾಗಿ ಹುಲಿಯುಗುರು ಮನೆಗಳಲ್ಲಿ ಇಟ್ಟುಕೊಂಡಿರುತ್ತಾರೆ. ಅವರನ್ನೆಲ್ಲ ಬಂಧಿಸಿ ಜೈಲಿಗೆ ಹಾಕುತ್ತಾ ಹೋದರೆ, ನಾಡಿನ ಜೈಲುಗಳು ಸಾಕಾಗಲ್ಲ. ಅರಣ್ಯ ಇಲಾಖೆ ಹುಲಿಯುಗುರು ಇಟ್ಟುಕೊಂಡಿರುವವರನ್ನು ಬಂಧಿಸುತ್ತಿರೋದು ಸರಿಯಲ್ಲ. ರಾಜ್ಯ ಸರ್ಕಾರ, ಅರಣ್ಯ ಇಲಾಖೆ ಸಚಿವ ಮತ್ತು ಅಧಿಕಾರಿಗಳು ವಿಷಯದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯಿದೆ ಎಂದು ಅರಗ ಜ್ಞಾನೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ