Video: ದೇವಸ್ಥಾನದ ಆವರಣದಲ್ಲಿ ಮೂತ್ರ ಮಾಡಿದ್ದಕ್ಕೆ, ಮೂತ್ರ ನೆಕ್ಕುವಂತೆ ಒತ್ತಾಯಿಸಿ ವೃದ್ಧನನ್ನು ಥಳಿಸಿದ ಜನ

Updated on: Oct 22, 2025 | 8:30 AM

ದೇವಸ್ಥಾನದ ಆವರಣದಲ್ಲಿ ಮೂತ್ರ ಮಾಡಿದ್ದಕ್ಕೆ, ಮೂತ್ರ ನೆಕ್ಕುವಂತೆ ವೃದ್ಧನನ್ನು ಒತ್ತಾಯಿಸಿ ಥಳಿಸಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಬಲವಂತವಾಗಿ ತನ್ನ ಮೂತ್ರವನ್ನೇ ನೆಕ್ಕುವಂತೆ ಮಾಡಿದ ಘಟನೆ ಕಾಕೋರಿಯ ಶೀತ್ಲಾ ಮಾತಾ ದೇವಸ್ಥಾನದಲ್ಲಿ ನಡೆದಿದೆ. ಹತಾ ಹಜರತ್ ಸಾಹಿಬ್ ನಿವಾಸಿ ರಾಂಪಾಲ್ ಎಂಬ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಲಕ್ನೋ, ಆಕ್ಟೋಬರ್ 22: ದೇವಸ್ಥಾನದ ಆವರಣದಲ್ಲಿ ಮೂತ್ರ ಮಾಡಿದ್ದಕ್ಕೆ, ಮೂತ್ರ ನೆಕ್ಕುವಂತೆ ವೃದ್ಧನನ್ನು ಒತ್ತಾಯಿಸಿ ಥಳಿಸಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಬಲವಂತವಾಗಿ ತನ್ನ ಮೂತ್ರವನ್ನೇ ನೆಕ್ಕುವಂತೆ ಮಾಡಿದ ಘಟನೆ ಕಾಕೋರಿಯ ಶೀತ್ಲಾ ಮಾತಾ ದೇವಸ್ಥಾನದಲ್ಲಿ ನಡೆದಿದೆ. ಹತಾ ಹಜರತ್ ಸಾಹಿಬ್ ನಿವಾಸಿ ರಾಂಪಾಲ್ ಎಂಬ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಾಂಪಾಲ್ ದೇವಾಲಯದ ಆವರಣದಲ್ಲಿ ಕುಳಿತಿದ್ದಾಗ ಅನಾರೋಗ್ಯದ ಕಾರಣದಿಂದಾಗ ಅಲ್ಲೇ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ.ಬಳಿಕ ಅವರು ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದಾರೆಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಶಿಕ್ಷೆಯಾಗಿ ಮೂತ್ರವನ್ನು ನೆಕ್ಕುವಂತೆ ಒತ್ತಾಯಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ