ಚನ್ನಪಟ್ಟಣದ ಗ್ರಾಮವೊಂದರಲ್ಲಿ ಹಿರಿಯ ಮಹಿಳೆಯೊಬ್ಬರು ನಿಖಿಲ್ ಕುಮಾರಸ್ವಾಮಿಯನ್ನು ಮನಸಾರೆ ಹರಸಿದರು

Updated on: Nov 04, 2024 | 5:59 PM

ಪ್ರಚಾರದ ವೇಳೆ ನಿಖಿಲ್ ಕುಮಾರಸ್ವಾಮಿ ದೇವಸ್ಥಾನವೊಂದಕ್ಕೆ ತೆರಳಿ ಅರ್ಚನೆ ಮಾಡಿಸುತ್ತಾರೆ. ಅವರ ಬಲಪಾರ್ಶ್ವದಲ್ಲಿದ್ದ ಸ್ಥಳೀಯ ಮುಖಂಡರೊಬ್ಬರು ಆರತಿ ತಟ್ಟೆಗೆ ಹಾಕಲು ಹಣವನ್ನು ನಿಖಿಲ್ ಕೈಗೆ ತುರುಕಲು ಪ್ರಯತ್ನಿಸುತ್ತಾರೆ. ಅದರೆ, ಜೆಡಿಎಸ್ ಯುವನಾಯಕ ದುಡ್ಡು ತೆಗೆದುಕೊಳ್ಳಲ್ಲ, ಸುಮ್ಮನೆ ನಮಸ್ಕರಿಸುತ್ತಾರೆ.

ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದ ಗ್ರಾಮಗಳಿಗೆ ತೆರಳಿ ಮತ ಯಾಚಿಸುವುದನ್ನು ಮುಂದುವರಿಸಿದ್ದಾರೆ. ಹೋದೆಡೆಯೆಲ್ಲ ಅವರಿಗೆ ಉತ್ತಮ ಜನಬೆಂಬಲ ಸಿಗುತ್ತಿರೋದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಗ್ರಾಮದ ಹಿರಿಯ ಮಹಿಳೆಯೊಬ್ಬರು ನಿಖಿಲ್​ರನ್ನು ಮನಸಾರೆ ಹರಿಸುತ್ತಾರೆ ಮತ್ತು ಇನ್ನೊಬ್ಬ ಮಹಿಳೆ ಕೈಯಲ್ಲಿದ್ದ ಆರತಿ ತಟ್ಟೆ ಇಸಿದುಕೊಂಡು ಬೆಳಗುತ್ತಾರೆ. ಅವರು ತೋರುವ ಪ್ರೀತಿಯಲ್ಲಿ ಕೃತಿಮತೆ ಇಲ್ಲ ಎಲ್ಲವೂ ಸಹಜ ಮತ್ತು ಸ್ವಾಭಾವಿಕ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಅಬ್ಬರದ ಪ್ರಚಾರ, ಹರಕೆ ಕಟ್ಟಿದ ಯೋಗೇಶ್ವರ್: ನಿಖಿಲ್ ಪರ ಪ್ರಚಾರಕ್ಕಿಳಿದ ಪತ್ನಿ ರೇವತಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More