ಆನೇಕಲ್ ಬ್ರಹ್ಮರಥೋತ್ಸವದಲ್ಲಿ ಡೊಳ್ಳುವಾದ್ಯಕ್ಕೆ ಹೆಜ್ಜೆಹಾಕಿದ ಹಿರಿಮಹಿಳೆ ದಳಪತಿ ಸಿನಿಮಾ ಹಾಡಿನ ದೃಶ್ಯವೊಂದನ್ನು ನೆನಪಿಸಿದರು!

Updated on: Apr 15, 2024 | 5:14 PM

ಆನೇಕಲ್ ನಲ್ಲಿ ಇಂದು ಸುಪ್ರಸಿದ್ಧ ಶ್ರೀ ತಿಮ್ಮರಾಯಸ್ವಾಮಿ ಜಾತ್ರೆ ಬ್ರಹ್ಮರಥೋತ್ಸವದ ಸಂಭ್ರಮದಲ್ಲಿ ಭಾಗಿಯಾದ ಹಿರಿಯ ಮಹಿಳೆಯೊಬ್ಬರು ಡೊಳ್ಳು ಕುಣಿತಕ್ಕೆ ಭರ್ಜರಿಯಾಗಿ ಹೆಜ್ಜೆ ಹಾಕಿದರು. ಇವರು ಸಹ ದಳಪತಿ ಸಿನಿಮಾದ ಅಜ್ಜಿಯ ಹಾಗೆ ನೆರೆತ ಕೂದಲು ಹೊಂದಿರುವ ಜೊತೆಗೆ ಸೀರೆಯೂ ಹಳದಿ ಬಣ್ಣದ್ದೇ ಉಟ್ಟಿರುವುದರಿಂದ ನಿಮ್ಮಲ್ಲಿ ನೋಸ್ಟಾಲ್ಜಿಯ ಅನುಭವ ಉಂಟಾದರೆ ಆಶ್ಚರ್ಯವಿಲ್ಲ.

ಆನೇಕಲ್: ನೀವು ರಜನೀಕಾಂತ್ (Rajinikanth), ಮಮ್ಮೂಟಿ, ಶೋಭಾ, ಗೀತಾ, ಭಾನುಪ್ರಿಯ ಮೊದಲಾದವರು ಅಭಿನಯಿಸಿದ್ದ ಮಣಿರತ್ನಂ ಅವರ ‘ದಳಪತಿ’ (Dalapati) ತೆಲುಗು ಸಿನಿಮಾ ನೋಡಿದ್ದರೆ, ಈ ವಿಡಿಯೋ ನೋಡುವಾಗ ಆ ಸಿನಿಮಾದ ‘ಸಿಂಗಾರಾಲ ಪೈರುಲ್ಲೋನಾ…’ ಹಾಡು ಖಂಡಿತ ನೆನಪಾಗುತ್ತದೆ. ಅದರಲ್ಲಿ ಇದೇ ವಯಸ್ಸಿನ ಅಜ್ಜಿಯೊಬ್ಬರು ರಜನೀಕಾಂತ್ ಗೆ ಸವಾಲೆಸೆದು ಕುಣಿಯುತ್ತಾರೆ. ಆ ಹಾಡಿನ ಚಿತ್ರೀಕರN ಮತ್ತು ಎ ಅರ್ ರೆಹಮಾನ್ ಸಂಗೀತ ನೋಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಆನೇಕಲ್ ನಲ್ಲಿ ಇಂದು ಸುಪ್ರಸಿದ್ಧ ಶ್ರೀ ತಿಮ್ಮರಾಯಸ್ವಾಮಿ ಜಾತ್ರೆ ಬ್ರಹ್ಮರಥೋತ್ಸವದ (Sri Timmarayaswamy Jatre Brahmarathotsava) ಸಂಭ್ರಮದಲ್ಲಿ ಭಾಗಿಯಾದ ಹಿರಿಯ ಮಹಿಳೆಯೊಬ್ಬರು ಡೊಳ್ಳು ಕುಣಿತಕ್ಕೆ ಭರ್ಜರಿಯಾಗಿ ಹೆಜ್ಜೆ ಹಾಕಿದರು. ಇವರು ಸಹ ದಳಪತಿ ಸಿನಿಮಾದ ಅಜ್ಜಿಯ ಹಾಗೆ ನೆರೆತ ಕೂದಲು ಹೊಂದಿರುವ ಜೊತೆಗೆ ಸೀರೆಯೂ ಹಳದಿ ಬಣ್ಣದ್ದೇ ಉಟ್ಟಿರುವುದರಿಂದ ನಿಮ್ಮಲ್ಲಿ ನೋಸ್ಟಾಲ್ಜಿಯ ಅನುಭವ ಉಂಟಾದರೆ ಆಶ್ಚರ್ಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಆನೇಕಲ್ ನಡುರಸ್ತೆಯಲ್ಲೇ ಕಾಂಗ್ರೆಸ್ ಮುಖಂಡನಿಂದ ಹೆಡ್ ಕಾನ್ಸ್​ಟೇಬಲ್ ಮೇಲೆ ಹಲ್ಲೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More