ಆನೇಕಲ್ ನಡುರಸ್ತೆಯಲ್ಲೇ ಕಾಂಗ್ರೆಸ್ ಮುಖಂಡನಿಂದ ಹೆಡ್ ಕಾನ್ಸ್​ಟೇಬಲ್ ಮೇಲೆ ಹಲ್ಲೆ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದ ರಾಮದೇವರ ವೃತ್ತದ ನಡುರಸ್ತೆಯಲ್ಲೇ ಹೆಡ್ ಕಾನ್ಸ್​ಟೇಬಲ್ ಮೇಲೆ ಕಾಂಗ್ರೆಸ್ ಮುಖಂಡನಿಂದ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಹೆಚ್​ಸಿ ಅಶೋಕ್ ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹಲ್ಲೆ ಮಾಡಿದ ಯಲ್ಲಪ್ಪನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆನೇಕಲ್ ನಡುರಸ್ತೆಯಲ್ಲೇ ಕಾಂಗ್ರೆಸ್ ಮುಖಂಡನಿಂದ ಹೆಡ್ ಕಾನ್ಸ್​ಟೇಬಲ್ ಮೇಲೆ ಹಲ್ಲೆ
ಹಲ್ಲೆಗೊಳಗಾದ ಹೆಡ್ ಕಾನ್ಸ್​ಟೇಬಲ್, ಕಾಂಗ್ರೆಸ್ ಮುಖಂಡ
Follow us
ರಾಮು, ಆನೇಕಲ್​
| Updated By: ಗಂಗಾಧರ​ ಬ. ಸಾಬೋಜಿ

Updated on: Mar 29, 2024 | 10:24 PM

ಆನೇಕಲ್, ಮಾರ್ಚ್​ 29: ಹೆಡ್ ಕಾನ್ಸ್​ಟೇಬಲ್ (head constable) ಮೇಲೆ ಕಾಂಗ್ರೆಸ್ ಮುಖಂಡನಿಂದ ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಸಂಸದ ಡಿ.ಕೆ.ಸುರೇಶ್, ಆನೇಕಲ್ ಶಾಸಕ ಶಿವಣ್ಣ ಆಪ್ತನಿಂದ ಆನೇಕಲ್ ಪಟ್ಟಣದ ರಾಮದೇವರ ವೃತ್ತದ ನಡುರಸ್ತೆಯಲ್ಲೇ ಹಲ್ಲೆ ಮಾಡಲಾಗಿದೆ. ಹೆಡ್​ ಕಾನ್ಸ್​ಟೇಬಲ್ ಅಶೋಕ್ ಮೇಲೆ ಯಲ್ಲಪ್ಪನಿಂದ ಹಲ್ಲೆ ಮಾಡಲಾಗಿದೆ. ಹೆಚ್​ಸಿ ಅಶೋಕ್ ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹಲ್ಲೆ ಮಾಡಿದ ಯಲ್ಲಪ್ಪನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರು ಪಾರ್ಕ್ ಮಾಡಿ ಹೆಡ್​ಕಾನ್ಸ್​ಟೇಬಲ್ ಅಶೋಕ್ ತೆರಳುತ್ತಿದ್ದರು. ಈ ವೇಳೆ ಏನೂ ಗುರಾಯಿಸುತ್ತಿದ್ದೀಯಾ ಎಂದು ಯಲ್ಲಪ್ಪ ಕೇಳಿದ್ದಾರೆ. ನಾನು ನಿನ್ನನ್ನು ಗುರಾಯಿಸಿಲ್ಲವೆಂದು ಅಶೋಕ್ ಮುಂದೆ ಸಾಗಿದ್ದು, ಹಿಂದಿನಿಂದ ಅಶೋಕ್ ಮೇಲೆ ಯಲ್ಲಪ್ಪ ಹಾಲಿನ ಕ್ರೇಟ್​ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ: ಆನೇಕಲ್‌ನ ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ; ಬಾಂಬ್ ನಿಷ್ಕ್ರಿಯ, ಶ್ವಾನ ದಳ ದೌಡು

ಆನೇಕಲ್ ಪಟ್ಟಣದಲ್ಲಿ ಪುಡಿರೌಡಿಗಳ ಗೂಂಡಾಗಿರಿ ಮಿತಿ ಮೀರಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆನೇಕಲ್ ಪೊಲೀಸರು ವಿಫಲರಾಗಿದ್ದಾರೆ. ಪುಂಡರನ್ನು ನಿಯಂತ್ರಿಸದ ಪೊಲೀಸರ ವಿರುದ್ಧ ಸಾರ್ವಜನಿಕರು ಕಿಡಿ ಕಾರಿದ್ದಾರೆ.

ಕುಡಿದ ಮತ್ತಿನಲ್ಲಿ ಆಟೋ ಚಾಲಕ ಹಾಗೂ ಪ್ರಯಾಣಿಕನ ನಡುವೆ ಮಾರಾಮಾರಿ

ಕುಡಿದ ಮತ್ತಿನಲ್ಲಿ ಆಟೋ ಚಾಲಕ ಹಾಗೂ ಪ್ರಯಾಣಿಕನ ನಡುವೆ ಮಾರಾಮಾರಿ ನಡೆದಿರುವಂತಹ ಘಟನೆ ಬೆಂಗಳೂರು ‌ಹೊರವಲಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಪ್ರಜ್ವಲ್ ಹಲ್ಲೆಗೊಳಗಾದ ಪ್ರಯಾಣಿಕನಾಗಿದ್ದು, ಶ್ರೀನಾಥ್ ಹಲ್ಲೆ ನಡೆಸಿದ ಆಟೋ ಚಾಲಕನಾಗಿದ್ದಾನೆ. ಪಟ್ಟಣದ ಎಸ್.ಕೆ ಬಾರ್​ನಲ್ಲಿ ಇಬ್ಬರು ಪ್ರತ್ಯೇಕವಾಗಿ ಕುಡಿದು ಬಳಿಕ ಅಲ್ಲಿಂದ ಹೊರಬಂದು ಪ್ರಯಾಣಿಕ ಪ್ರಜ್ವಲ್ ಆಟೋ ಹತ್ತಿದ್ದ.

ಇದನ್ನೂ ಓದಿ: ಹೋಳಿ ಆಡಲು ಹೋಗಿದ್ದ ವ್ಯಕ್ತಿ ನಿಗೂಢ ಸಾವು; ಮ್ಯಾನೇಜರ್ ಸಾವಿನ ಸುತ್ತಾ ಅನುಮಾನದ ಹುತ್ತಾ

ಈ ವೇಳೆ ಆಟೋ ಚಾಲಕ ಶ್ರೀನಾಥ್ ದುಬಾರಿ ಬಾಡಿಗೆ ಕೇಳಿದ್ದ, ಈ ಸಂಧರ್ಭದಲ್ಲಿ ಇಬ್ಬರ ನಡುವೆ ಮಾತಿನಚಕಮಕಿ ನಡೆದು ಮಾರಾಮಾರಿ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಆಟೋ ಚಾಲಕ ಶ್ರೀನಾಥ್ ಕಲ್ಲಿನಿಂದ ಪ್ರಯಾಣಿಕ ಪ್ರಜ್ವಲ್ ತಲೆಗೆ ಹೊಡೆದಿದ್ದಾನೆ. ತಲೆಗೆ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡಿದ್ದ ಪ್ರಜ್ವಲ್ನನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ನೀಡಲಾಗಿದೆ. ಇನ್ನೂ ಹಲ್ಲೆ ನಡೆಸಿದ ಆಟೋ ಚಾಲಕ ಶ್ರೀನಾಥ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್