AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಆಡಲು ಹೋಗಿದ್ದ ವ್ಯಕ್ತಿ ನಿಗೂಢ ಸಾವು; ಮ್ಯಾನೇಜರ್ ಸಾವಿನ ಸುತ್ತಾ ಅನುಮಾನದ ಹುತ್ತಾ

ಆತ ಪಧವೀಧರ, ಕೊರೊನಾ ಸಂಧರ್ಭದಲ್ಲಿ ಕೆಲಸ ಕಳೆದುಕೊಂಡು ಗ್ರಾಮಕ್ಕೆ ಬಂದಿದ್ದು, ತೋಟವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡು ಗ್ರಾಮದಲ್ಲೆ ಉಳಿದುಕೊಂಡಿದ್ದ. ಆದ್ರೆ, ಚೆನ್ನಾಗಿದ್ದ ವ್ಯಕ್ತಿ ನಿನ್ನೆ(ಮಾ.25) ಹೋಳಿ ಆಡೋಕ್ಕೆಂದು ಹೋದವರು ನಿಗೂಢವಾಗಿ ನಾಪತ್ತೆಯಾಗಿ ಶವವಾಗಿ ಸಿಕ್ಕಿದ್ದಾನೆ. ಇದೀಗ ಸಾವಿನ ಸುತ್ತಾ ಹಲವು ಅನುಮಾನಗಳು ಹುಟ್ಟಿವೆ. ಹಾಕಿವೆ.

ಹೋಳಿ ಆಡಲು ಹೋಗಿದ್ದ ವ್ಯಕ್ತಿ ನಿಗೂಢ ಸಾವು; ಮ್ಯಾನೇಜರ್ ಸಾವಿನ ಸುತ್ತಾ ಅನುಮಾನದ ಹುತ್ತಾ
ಮೃತ ವ್ಯಕ್ತಿ
ನವೀನ್ ಕುಮಾರ್ ಟಿ
| Edited By: |

Updated on:Mar 26, 2024 | 10:00 PM

Share

ಬೆಂಗಳೂರು ಗ್ರಾಮಾಂತರ, ಮಾ.26: ನಿನ್ನೆ(ಮಾ.25) ದೇಶದಲ್ಲೆಡೆ ಹೋಳಿಯ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಪರಸ್ಪರ ಬಣ್ಣ ಹಾಕಿಕೊಳ್ಳುವ ಮೂಲಕ ಹೋಳಿ(Holi) ಆಚರಣೆ ಮಾಡಿದ್ದಾರೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ(Bangalore Rural)ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾರಸಿಂಹನಹಳ್ಳಿ ಗ್ರಾಮದ ಮ್ಯಾನೇಜರ್ ಸುನೀಲ್ ಮತ್ತು ಬಿಹಾರ ಮೂಲದ ಕಾರ್ಮಿಕರು ಹೋಳಿ ಆಡಿ ಸಂಭ್ರಮಿಸಿದ್ದರು. ಆದ್ರೆ, ಹೋಳಿ ಆಡಿದ ನಂತರ ತೋಟದ ಮ್ಯಾನೇಜರ್ ಸುನೀಲ್ ಮನೆಯತ್ತ ತೆರಳುವುದಾಗಿ ಹೇಳಿದ್ದು, ಮಧ್ಯರಾತ್ರಿ ಆದರೂ ಮನೆಗೆ ಹೋಗಿಲ್ಲ. ಹೀಗಾಗಿ ಸುನೀಲ್ ಎಷ್ಟೋತ್ತಾದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಶಾಕ್ ಆಗಿ, ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಆದ್ರೆ, ಎಲ್ಲೂ ಕಾಣದಿದ್ದಾಗ ಬೆಳಗ್ಗೆ ತೋಟದ ಕೃಷಿ ಹೊಂಡದ ದಡದ ಮೇಲೆ ಯುವಕನ ಬಟ್ಟೆ ಚಪ್ಪಲಿ ಕಾಣಿಸಿದ್ದು, ಅನುಮಾನದ ಮೇಲೆ ಕೃಷಿ ಹೊಂಡದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಯುವಕನ ಮೃತದೇಹ ಕೃಷಿ ಹೊಂಡದಲ್ಲಿ ಸಿಕ್ಕಿದ್ದು, ಕುಟುಂಬಸ್ಥರ ಜೊತೆಗೆ ಗ್ರಾಮಸ್ಥರು ಸಹ ಒಂದು ಕ್ಷಣ ಶಾಕ್ ಆಗಿದ್ದಾರೆ.

ಮೃತ ಯುವಕ ಸುನೀಲ್ ಈ ಹಿಂದೆಯೇ ಈಜು ಸಹ ಕಲಿತಿದ್ದು, ಗ್ರಾಮದಲ್ಲಿ ಎಲ್ಲರ ಜೊತೆ ಸ್ನೇಹ ಸೌಹರ್ದತೆಯಿಂದ ಹೊಂದಿಕೊಂಡು ಜೀವನ ನಡೆಸುತ್ತಿದ್ದನಂತೆ. ಜೊತೆಗೆ ಕೃಷಿ ಹೊಂಡದಲ್ಲಿ ಸಿಕ್ಕ ಮೃತದೇಹದ ಮೇಲೆ ಕಲೆ ಹಾಗೂ ಮುಖದ ತುಂಬಾ ಗಾಯದ ಗುರುತುಗಳು ಪತ್ತೆಯಾಗಿದ್ದು ಇದು ಆಕಸ್ಮಿಕ ಸಾವಲ್ಲ ಯಾರೋ ದುಷ್ಕ್ರರ್ಮಿಗಳು ಕೊಲೆ ಮಾಡಿ ನೀರಿಗೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ನಿನ್ನೆ ಹೋಳಿ ಆಟ ಆಡಿದವನು ನೇರವಾಗಿ ಮನೆಗೆ ಬರಬೇಕಿತ್ತು. ಆದ್ರೆ, ತೋಟದಲ್ಲೆ ಶವವಾಗಿ ಸಿಕ್ಕಿದ್ದು. ಈ ಹಿಂದೆ ಕೆಲಸ ಮಾಡ್ತಿದ್ದ ಮ್ಯಾನೇಜರ್​ ಅಥವಾ ಬಿಹಾರ ಮೂಲದ ಕೂಲಿ ಕಾರ್ಮಿಕರು ಕೊಲೆ ಮಾಡಿರುವ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಆಕಸ್ಮಿಕ ಅವಘಡಕ್ಕೆ ವೃದ್ದನನ್ನು ಬೆಂಕಿಯಲ್ಲಿ ಹಾಕಿ ಕೊಲೆಗೆ ಯತ್ನ; ಮೂವರ ಬಂಧನ

ಒಟ್ಟಾರೆ ಗ್ರಾಮದಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಯುವಕ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ. ಇನ್ನು ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಪೊಲೀಸರ ತನಿಖೆಯ ನಂತರ ಕೊಲೆಯೋ ಆಕಸ್ಮಿಕ ಸಾವೋ ಎನ್ನುವುದು ಗೊತ್ತಾಗಲಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 pm, Tue, 26 March 24

Follow Us
Naveen Kumar
Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More