ಪತ್ನಿಯ ಅನೈತಿಕ‌ ಸಂಬಂಧ, ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ; ಅಂತ್ಯಕ್ರಿಯೆಗೂ ಬರದೆ ಮಕ್ಕಳೊಂದಿಗೆ ಎಸ್ಕೇಪ್

ಬೆಂಗಳೂರಿನ ಗೋವಿಂದಪುರ ವ್ಯಾಪ್ತಿಯಲ್ಲಿ ವಾಸವಾಗಿದ್ದ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಕಿರುಕುಳ, ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿ ಗೋಡೆ ಮೇಲೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ದೂರು ದಾಖಲಾಗಿದ್ದು ಪತಿಯ ಅಂತ್ಯಸಂಸ್ಕಾರಕ್ಕೂ ಬರದೆ ಪತ್ನಿ ತನ್ನ ಮಕ್ಕಳೊಂದಿಗೆ ಎಸ್ಕೇಪ್ ಆಗಿದ್ದಾರೆ. ಮಹಿಳೆ ಹಾಗೂ ಅವರ ಕುಟುಂಬಸ್ಥರಿಗಾಗಿ ಹುಡುಕಾಟ ನಡೆಯುತ್ತಿದೆ.

ಪತ್ನಿಯ ಅನೈತಿಕ‌ ಸಂಬಂಧ, ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ; ಅಂತ್ಯಕ್ರಿಯೆಗೂ ಬರದೆ ಮಕ್ಕಳೊಂದಿಗೆ ಎಸ್ಕೇಪ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Mar 26, 2024 | 8:34 AM

ಬೆಂಗಳೂರು, ಮಾರ್ಚ್​.26: ಪತ್ನಿಯ ಅನೈತಿಕ‌ ಸಂಬಂಧ ಮತ್ತು ವಿಚ್ಛೇದನ ಪಡೆಯಲು 5 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ ಹಿನ್ನೆಲೆ ಪತಿ ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿಬಂದಿದೆ (Husband Wife). ಪತ್ನಿಯ ಕಿರುಕುಳ ತಾಳಲಾಗದೆ ಗೋಡೆ ಮೇಲೆಯೇ ಡೆತ್ ನೋಟ್ ಬರೆದು ಪತಿ ನೇಣು (Hanging) ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೈಯದ್ ಅಕ್ಮಲ್ ಅನ್ಸರ್ (34) ಆತ್ಮಹತ್ಯೆಗೆ ಶರಣಾದ ಪತಿ. ಘಟನೆ ಸಂಬಂಧ ಪತ್ನಿ ಖತೀಜತುಲ್ ಕುಬ್ರಾ, ಮಾವ ಮುನಾವರ್ ಸುಬಾನ್, ಪತ್ನಿಯ ಸಂಬಂಧಿಕರಾದ ಅಖೀಬ್, ಅಬ್ದುಲ್ ರಹಮ್ಮಾನ್ ಮನ್ಸೂರ್ ಸೇರಿದಂತೆ ಏಳು ಜನರ ಮೇಲೆ ಎಫ್ಐಆರ್ ದಾಖಲಾಗಿದೆ.

ಪತ್ನಿಯ ಕೃತ್ಯಕ್ಕೆ ಸಾಥ್ ನೀಡಿ ಪತಿಗೆ ಕಿರುಕುಳ ಕೊಟ್ಟ ಆರೋಪದ ಮೇಲೆ 7 ಜನರ ವಿರುದ್ಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೆ.ಪಿ.ಮಾರ್ಗನ್ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಅಕ್ಮಲ್ ಅನ್ಸರ್ ಕಳೆದ ಏಳು ವರ್ಷದ ಹಿಂದೆ ಕುಬ್ರಾ ಜೊತೆಗೆ ವಿವಾಹವಾಗಿದ್ದರು. ಗೋವಿಂದಪುರ ಫ್ಲಾಟ್ ಒಂದರಲ್ಲಿ ವಾಸವಿದ್ದ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಪತ್ನಿ ಕುಬ್ರಾ ಗಂಡನ ಮೇಲೆ ಅನುಮಾನ‌ ಪಡುತ್ತಿದ್ದಳು. ಅಲ್ಲದೇ ಹೆಚ್ಚು ಹಣ ಕೊಡುವಂತೆ ಬಲವಂತ ಮಾಡ್ತಿದ್ದಳು. ಒಂದು ತಿಂಗಳ‌ ಹಿಂದೆ ಗಂಡನ ಜೊತೆ ಗಲಾಟೆ ಮಾಡಿಕೊಂಡು ಬಿಟಿಎಂ ಲೇಔಟ್​ನಲ್ಲಿರುವ ತಾಯಿ ಮನೆಗೆ ಕುಬ್ರಾ ಬಂದಿದ್ದಳು. ಈ ವೇಳೆ ಅಕ್ಮಲ್ ಅನ್ಸರ್ ಫ್ಲಾಟ್​ನಲ್ಲಿ ಒಬ್ಬಂಟಿಯಾಗಿದ್ದ. ಆದರೆ ಮಾರ್ಚ್ 12 ರಂದು ಗೋಡೆ ಮೇಲೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಾಲಕನ ಅಪಹರಣ, 25 ಲಕ್ಷ ರೂ.ಗೆ ಬೇಡಿಕೆ, ಗೋಣಿಚೀಲದಲ್ಲಿ ಶವ ಪತ್ತೆ

ನನ್ನ ಸಾವಿಗೆ ಪತ್ನಿ ಕುಬ್ರಾ ಹಾಗೂ ಕುಟುಂಬಸ್ಥರು ಕಾರಣ. ಮುನಾವರ್ ಸುಬಾನ್, ಮನ್ಸೂರ್, ಆಖಿಬ್, ಅಜೀಮ್, ಅಬ್ದುಲ್ ರಹಮಾನ್ ನನ್ನ ಜೀವನ ಹಾಳು ಮಾಡಿದ್ರು ಎಂದು ಗೋಡೆ ಮೇಲೆ ಬರೆದು ಅಕ್ಮಲ್ ಅನ್ಸರ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ಕರೆಗಳನ್ನು ಸ್ವೀಕರಿಸದಿದ್ದಾಗ ಅನುಮಾನಗೊಂಡ ತಾಯಿ ಫ್ಲಾಟ್​ಗೆ ಬಂದು ನೋಡಿದಾಗ ಆತ್ಮಹತ್ಯೆಯ ವಿಚಾರ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಮೃತನ ಸಹೋದರ ದೂರು ದಾಖಲಿಸಿದ್ದಾನೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಗಂಡನ ಸಾವಿನ ಬಳಿಕ ಪತಿ ಹಾಗೂ ಮಕ್ಕಳ ಸುಳಿವಿಲ್ಲ. ಗಂಡನ ಮುಖವನ್ನೂ ನೋಡಲು ಪತ್ನಿ ಬಂದಿಲ್ಲ. ಹಾಗೂ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಮಕ್ಕಳನ್ನೂ ಬಿಡದೆ ಮಕ್ಕಳೊಂದಿಗೆ ತಾಯಿ ಎಸ್ಕೇಪ್ ಆಗಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ