ದ್ವಿಚಕ್ರ ವಾಹನ ಸವಾರನಿಗೆ ದಿಡೀರನೆ ಎದುರಾದ ಕಾಡಾನೆ, ಮೈ ನಡುಗಿಸುವ ವಿಡಿಯೋ ಇಲ್ಲಿದೆ

Edited By:

Updated on: Dec 22, 2022 | 12:23 PM

ಕಾಡಾನೆ ಕಂಡು ಗಾಬರಿಯಿಂದ ವಾಹನ ನಿಲ್ಲಿಸುತ್ತಿದ್ದಂತೆ ಯುವಕನ ಕಡೆಗೆ ಒಂಟಿಸಲಗ ನುಗ್ಗಿದೆ. ಆಗ ವಾಹನ ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾನೆ.

ಹಾಸನ: ಕಾಡಾನೆಯೊಂದು ದಿಡೀರನೆ ಎದುರಿಗೆ ಬಂದಿದ್ದು ಸಾವರ ಬೈಕ್ ಬಿಟ್ಟು ಓಡಿ ಪ್ರಾಣ ಉಳಿಸಿಕೊಂಡ ಭಯಾನಕ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ನಡೆದಿದೆ. ರಸ್ತೆಯ ತಿರುವಿನಲ್ಲಿ ಒಂಟಿಸಲಗ ನಿಂತಿತ್ತು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಯುವಕ ಕಾಡಾನೆ ಕಂಡು ವಾಹನ ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾನೆ. ಕಾಡಾನೆ ಕಂಡು ಗಾಬರಿಯಿಂದ ವಾಹನ ನಿಲ್ಲಿಸುತ್ತಿದ್ದಂತೆ ಯುವಕನ ಕಡೆಗೆ ಒಂಟಿಸಲಗ ನುಗ್ಗಿದೆ. ಆಗ ವಾಹನ ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾನೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಯುವಕ ಪಾರಾಗಿದ್ದಾನೆ. ಕಾಡಾನೆ-ಯುವಕನ ವಿಡಿಯೋ ವೈರಲ್ ಆಗಿದೆ.

Published on: Dec 22, 2022 10:14 AM
Follow Us
Web contact

TV9 Kannada

Read More