Elephant Census: ಆನೆಗಳಿಗೂ ಬಂಡೀಪುರ ಅಂದ್ರೆ ಪಂಚಪ್ರಾಣ!

| Updated By: ಸಾಧು ಶ್ರೀನಾಥ್​

Updated on: Aug 11, 2023 | 3:55 PM

Bandipur, Chamarajanagar: ರಾಜ್ಯ ಸರ್ಕಾರದಿಂದ ಆನೆ ಗಣತಿಯೂ ಬಿಡುಗಡೆಯಾಗಿದ್ದು ಅತಿ ಹೆಚ್ಚು ಆನೆ, ಹುಲಿ, ಚಿರತೆ ಹೊಂದಿರುವ ವನ್ಯಜೀವಿಗಳು ಬೀಡು ಬಂಡೀಪುರವಾಗಿದೆ.

Elephant Census: ಅದೊಂದು ದೇಶದ ಪ್ರಸಿದ್ದ ಹುಲಿ ಸಂರಕ್ಷಿತಾರಣ್ಯ.ವನ್ಯಜೀವಿಗಳ ಆವಾಸ ಸ್ಥಾನ.ಕಳೆದ ತಿಂಗಳು ಬಿಡುಗಡೆಯಾದ ಹುಲಿ ಗಣತಿಯಲ್ಲಿ ದೇಶದಲ್ಲಿ ಎರಡನೇ ಸ್ಥಾನ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿತ್ತು.ಆದ್ರಿಗಾ ರಾಜ್ಯ ಸರ್ಕಾರದಿಂದ ಆನೆ ಗಣತಿಯೂ ಬಿಡುಗಡೆಯಾಗಿದ್ದು ರಾಜ್ಯಕ್ಕೆ ನಂಬರ್ ಒನ್ ಆಗಿದೆ.ಅತಿ ಹೆಚ್ಚು ಆನೆ,ಹುಲಿ,ಚಿರತೆ ಹೊಂದಿರುವ ವನ್ಯಜೀವಿಗಳು ಬೀಡು ಬಂಡೀಪುರವಾಗಿದೆ (Bandipur, Chamarajanagar).ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ಹೌದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ 50 ನೇ ವರ್ಷದ ಸಂಭ್ರಮದಲ್ಲಿದೆ.ಈ ಸಂಭ್ರಮವೂ ಡಬಲ್ ಆಗುವಂತಹ ಘಟನೆಗಳು ಮತ್ತೇ ಮತ್ತೇ ಮರುಕಳಿಸ್ತಿದೆ.ಕಳೆದ ತಿಂಗಳು ಭಾರತ ಸರ್ಕಾರದಿಂದ ಹುಲಿ ಗಣತಿಯ ವರದಿ ಬಿಡುಗಡೆ ಆಗಿತ್ತು.

ಆ ವೇಳೆ ಬಂಡೀಪುರ ಇಡೀ ದೇಶದಲ್ಲಿ ಅತಿ ಹೆಚ್ಚು ಹುಲಿ ಹೊಂದಿರುವ ಎರಡನೇ ಹಾಗೂ ರಾಜ್ಯದಲ್ಲಿ ನಂಬರ್ ಒನ್ ಅರಣ್ಯ ಪ್ರದೇಶವಾಗಿ ಹೊರಹೊಮ್ಮಿತ್ತು.ಈ ಮೂಲಕ ಬಂಡೀಪುರದ ಹೆಮ್ಮೆ ಇಡೀ ರಾಷ್ಟ್ರಕ್ಕೆ ಮತ್ತಷ್ಟು ಪಸರಿಸಿತ್ತು.ಅಂಕಿ ಅಂಶಗಳ ಪ್ರಕಾರ ಬಂಡೀಪುರದಲ್ಲಿ 191 ಹುಲಿಗಳು ಪತ್ತೆಯಾಗಿದ್ದು,ರಾಜ್ಯದಲ್ಲಿ ಅತಿ ಹೆಚ್ಚು ಹುಲಿ ಹೊಂದಿರುವ ಅರಣ್ಯ ಎಂದು ಗುರುತಿಸಿಕೊಂಡಿತ್ತು.ಇದೀಗ ಕಳೆದ ಮೇ ತಿಂಗಳಲ್ಲಿ ಹುಲಿ ಗಣತಿಯಂತೆ ಆನೆ ಗಣತಿಯೂ ಕೂಡ ರಾಜ್ಯದ ಎಲ್ಲಾ ಅರಣ್ಯ ಪದೇಶದಲ್ಲೂ ಕೂಡ ನಡೆದಿತ್ತು.ಇದೀಗ ಅದರ ವರದಿ ಬಿಡುಗಡೆಯಾಗಿದ್ದು ಬಂಡೀಪುರದಲ್ಲಿ 1116 ಹುಲಿಗಳು ಪತ್ತೆಯಾಗಿವೆ.ಆ ಮೂಲಕ ಬಂಡೀಪುರ ರಾಜ್ಯದಲ್ಲಿ ಹುಲಿಯಷ್ಟೇ ಅಲ್ಲದೇ ಆನೆ ಗಣತಿಯಲ್ಲೂ ನಂಬರ್ ಒನ್ ಆಗಿದೆ -ರಮೇಶ್ ಕುಮಾರ್, ಸಿಎಫ್ ಬಂಡೀಪುರ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on