ಹಿಪೊಪೊಟಮಸ್ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಈ ವಿಡಿಯೋವನ್ನು ಅರಣ್ಯ ಪ್ರದೇಶದ ಹೊಳೆಯಲ್ಲಿ ರೆಕಾರ್ಡ್ ಮಾಡಲಾಗಿದೆ. ಇಲ್ಲಿ, ಅನೇಕ ಹಿಪೊಪೊಟಮಸ್ಗಳು ಕೊಳದಲ್ಲಿ ಸ್ನಾನ ಮಾಡುತ್ತಿವೆ. ಅವುಗಳ ನಡುವೆ ಆನೆಯೊಂದು ನಿಂತಿದೆ. ಸಾಮಾನ್ಯವಾಗಿ, ಯಾವುದೇ ಪ್ರಾಣಿಯು ಈ ರೀತಿ ಹಿಪ್ಪೋಗಳ ನಡುವೆ ಹೋಗುವ ತಪ್ಪನ್ನು ಮಾಡುವುದಿಲ್ಲ. ಏಕೆಂದರೆ ಹಿಪೊಪೊಟಮಸ್ ಸ್ವಭಾವತಃ ಆಕ್ರಮಣಕಾರಿ. ಆದರೆ ಇಲ್ಲಿ ಆನೆಯೊಂದು ನಿರ್ಭಯವಾಗಿ ನಿಂತಿದೆ. ತನ್ನ ಸುತ್ತಲಿನ ಹಿಪೊಗಳಿಗೆ ಹೆದರದೆ ನೀರನ್ನು ಎಂಜಾಯ್ ಮಾಡುತ್ತಿತ್ತು.
ನವದೆಹಲಿ, ಜನವರಿ 30: ಆನೆಗಳು ಶಕ್ತಿಶಾಲಿ ಪ್ರಾಣಿಗಳು ಮಾತ್ರವಲ್ಲ, ಧೈರ್ಯಶಾಲಿಗಳೂ ಆಗಿವೆ. ಅವುಗಳ ಧೈರ್ಯ ಕೆಲವೊಮ್ಮೆ ಸಿಂಹಗಳಿಗೂ ಬೆವರು ತರಿಸುತ್ತದೆ. ಆನೆ (Elephants) ಎಲ್ಲಿಗೇ ಹೋದರೂ ಸುತ್ತಮುತ್ತಲಿನ ಪ್ರಾಣಿಗಳು ಭಯಪಡುತ್ತವೆ. ಆದರೆ, ಕೆಲವೊಮ್ಮೆ ಕೆಲವು ಪ್ರಾಣಿಗಳು ಆನೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತವೆ. ಅವು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತವೆ. ಇತ್ತೀಚೆಗೆ, ಹಿಪೊಪೊಟಮಸ್ಗಳಿಂದ ಸುತ್ತುವರೆದ ನೀರಿನಲ್ಲಿ ನಿಂತ ಆನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಅರಣ್ಯ ಪ್ರದೇಶದ ಹೊಳೆಯಲ್ಲಿ ರೆಕಾರ್ಡ್ ಮಾಡಲಾಗಿದೆ. ಇಲ್ಲಿ, ಅನೇಕ ಹಿಪೊಪೊಟಮಸ್ಗಳು ಕೊಳದಲ್ಲಿ ಸ್ನಾನ ಮಾಡುತ್ತಿವೆ. ಅವುಗಳ ನಡುವೆ ಆನೆಯೊಂದು ನಿಂತಿದೆ. ಸಾಮಾನ್ಯವಾಗಿ, ಯಾವುದೇ ಪ್ರಾಣಿಯು ಈ ರೀತಿ ಹಿಪ್ಪೋಗಳ ನಡುವೆ ಹೋಗುವ ತಪ್ಪನ್ನು ಮಾಡುವುದಿಲ್ಲ. ಏಕೆಂದರೆ ಹಿಪೊಪೊಟಮಸ್ ಸ್ವಭಾವತಃ ಆಕ್ರಮಣಕಾರಿ. ಆದರೆ ಇಲ್ಲಿ ಆನೆಯೊಂದು ನಿರ್ಭಯವಾಗಿ ನಿಂತಿದೆ. ತನ್ನ ಸುತ್ತಲಿನ ಹಿಪೊಗಳಿಗೆ ಹೆದರದೆ ನೀರನ್ನು ಎಂಜಾಯ್ ಮಾಡುತ್ತಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ