Karnataka Assembly Polls: ಗಣ್ಯರಿಗೆ ಭದ್ರತೆ ಒದಗಿಸುವ ಮೈಸೂರು ಪೊಲೀಸ್ ಶ್ವಾನದಳದ ‘ಯೋಧ’ ಹತ್ತು ಜನರ ಕಾರ್ಯ ಒಬ್ಬನೇ ನಿರ್ವಹಿಸುತ್ತಾನೆ!
ಈ ಬೆಲ್ಜಿಯನ್ ಶೆಪ್ಹರ್ಡ್ ನಾಯಿಗೆ ಯೋಧ ಅಂತ ಹೆಸರು ನೀಡಿರುವುದು ಅತ್ಯಂತ ಸಮಂಜವಾಗಿದೆ.
ಮೈಸೂರು: ವಿಡಿಯೋದಲ್ಲಿ ಕಾಣುತ್ತಿರುವ ನಾಯಿಯನ್ನೊಮ್ಮೆ ನೋಡಿ. ಮೈಸೂರು ಪೊಲೀಸ್ ಶ್ವಾನದಳದ (dog squad) ಹೆಮ್ಮೆಯ ಸದಸ್ಯನಾಗಿರುವ ಈ ಬೆಲ್ಜಿಯನ್ ಶೆಪ್ಹರ್ಡ್ (Belgian Shepherd) ನಾಯಿಗೆ ಯೋಧ (Yodha) ಅಂತ ಹೆಸರು ನೀಡಿರುವುದು ಅತ್ಯಂತ ಸಮಂಜವಾಗಿದೆ. ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ದೆಹಲಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ವಾಡ್ರಾ, ರಾಹುಲ್ ಗಾಂಧಿ ಮೊದಲಾದ ನಾಯಕರ ದಂಡು ಪ್ರಚಾರಕ್ಕೆಂದು ರಾಜ್ಯದ ಸಾಂಸ್ಕೃತಿಕ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದು ಮಾಡಲಿರುವುದು ನಮಗೆ ಗೊತ್ತಿದೆ. ಗಣ್ಯ ಮತ್ತು ಅತಿಗಣ್ಯ ನಾಯಕರಿಗೆ ಮೈಸೂರು ಪೊಲೀಸ್ ಒದಗಿಸುತ್ತಿರುವ ಭದ್ರತೆಯ ಪ್ರಮುಖ ಭಾಗ ಈ ಯೋಧ ಆಗಿದೆ. ಅದು ಅಪಾರ ಬುದ್ಧಿಮತ್ತೆ ತಳಿಯ ನಾಯಿಯಾಗಿದ್ದು ಹತ್ತು ಜನ ಪೋಲಿಸರ ಕಾರ್ಯವನ್ನು ಒಂಟಿಯಾಗಿ ನಿರ್ವಹಿಸುವ ಕ್ಷಮತೆ ಹೊಂದಿದೆ ವಾಕ್ ಥ್ರೂ ಮಾಡಿರುವ ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

