ಇಂದಿರಾ ಗಾಂಧಿ 'ಗತವೈಭವ’ ಆಳ್ವಿಕೆಯ ಭಾಗವಾಗಿದ್ದ ತುರ್ತು ಪರಿಸ್ಥಿತಿಯನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ: ನಳಿನ್ ಕುಮಾರ್ ಕಟೀಲ್

ಇಂದಿರಾ ಗಾಂಧಿ ‘ಗತವೈಭವ’ ಆಳ್ವಿಕೆಯ ಭಾಗವಾಗಿದ್ದ ತುರ್ತು ಪರಿಸ್ಥಿತಿಯನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ: ನಳಿನ್ ಕುಮಾರ್ ಕಟೀಲ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 31, 2023 | 1:38 PM

ಭ್ರಷ್ಟಾಚಾರದ ವಿರುದ್ಧ ಮಾತಾಡಿದರೆ ಕೇಸ್, ಸೋಷಿಯಲ್ ಮೀಡಿಯಾದವರ ಮೇಲೆ ಪ್ರಕರಣಗಳು, ದ್ವೇಷದ ರಾಜಕಾರಣ, ರಾಜ್ಯಪಾಲರಲ್ಲಿಗೆ ದೂರು ಒಯ್ದವರನ್ನು ಹಿಡಿದು ಜೈಲಿಗೆ ಹಾಕುವುದು ಮೊದಲಾದ ಕೃತ್ಯಗಳು ನಡೆಯುತ್ತಿರುವುದರಿಂದ ತುರ್ತು ಪರಿಸ್ಥಿತಿ ರಾಜ್ಯದಲ್ಲಿ ಜಾರಿಯಾಗಿದೆ ಅಂತಲೇ ಅರ್ಥ ಎಂದ ಕಟೀಲ್ ಹೇಳಿದರು.

ಮಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಎಂದಿನಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ (state government) ವಿರುದ್ಧ ಪ್ರಹಾರ ನಡೆಸಿದರು. ನಿನ್ನೆ ಗೃಹಲಕ್ಷ್ಮಿ ಯೋಜನೆ (Gruha Lakshmi scheme ) ಜಾರಿಗೊಳಿಸಿದ ಬಳಿಕ ಇಂದಿರಾ ಗಾಂಧಿ (Indira Gandhi) ಆಳ್ವಿಕೆಯ ಗತವೈಭವ ವಾಪಸ್ಸು ಬಂದಿದೆ ಅಂತ ಕಾಂಗ್ರೆಸ್ ನಾಯಕರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಕಟೀಲ್, ಆ ಗತವೈಭವದಲ್ಲಿ ತುರ್ತು ಪರಿಸ್ಥಿತಿಯೂ ಸೇರಿತ್ತು ಅನ್ನೋದನ್ನು ಅವರು ಮರೆಯಬಾರದು ಎಂದರು. ರಾಜ್ಯದಲ್ಲಿ ಈಗಾಗಲೇ ಎಮರ್ಜೆನ್ಸಿಯಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ ಅವರು, ಭ್ರಷ್ಟಾಚಾರದ ವಿರುದ್ಧ ಮಾತಾಡಿದರೆ ಕೇಸ್, ಸೋಷಿಯಲ್ ಮೀಡಿಯಾದವರ ಮೇಲೆ ಪ್ರಕರಣಗಳು, ದ್ವೇಷದ ರಾಜಕಾರಣ, ರಾಜ್ಯಪಾಲರಲ್ಲಿಗೆ ದೂರು ಒಯ್ದವರನ್ನು ಹಿಡಿದು ಜೈಲಿಗೆ ಹಾಕುವುದು ಮೊದಲಾದ ಕೃತ್ಯಗಳು ನಡೆಯುತ್ತಿರುವುದರಿಂದ ತುರ್ತು ಪರಿಸ್ಥಿತಿ ರಾಜ್ಯದಲ್ಲಿ ಜಾರಿಯಾಗಿದೆ ಅಂತಲೇ ಅರ್ಥ ಎಂದರು. ಕಾವೇರಿ ನದಿ ನೀರನ್ನು ರಾತ್ರಿ ಸಮಯ ತಮಿಳುನಾಡುಗೆ ಹರಿಬಿಟ್ಟು ಸರ್ಕಾರ ರಾಜ್ಯದ ರೈತರಿಗೆ ಅನ್ಯಾಯವೆಸಗುತ್ತಿದೆ; ಬಿಜೆಪಿ, ಸರ್ಕಾರದ ಕ್ರಮ ಪ್ರಶ್ನಿಸಿ ಪ್ರತಿಭಟನೆ ನಡೆಸಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ