Raichur: ಟ್ರಾನ್ಸ್​ಫರ್ ಆದ ಶಿಕ್ಷಕರನ್ನು ಬೀಳ್ಕೊಡಲೊಲ್ಲದ ಮಕ್ಕಳು, ರಾಯಚೂರಿನ ಜಲದುರ್ಗದಲ್ಲಿ ಹೃದಯಸ್ಪರ್ಶಿ ಸನ್ನಿವೇಶ

ಅರುಣ್​ ಕುಮಾರ್​ ಬೆಳ್ಳಿ

Updated on: Jun 24, 2023 | 12:13 PM

ಮಕ್ಕಳು ತಬ್ಬಿಕೊಂಡು ಅಳುತ್ತಿರುವುದರಿಂದ ವಿದಾಯಗೊಳ್ಳುತ್ತಿರುವ ಶಿಕ್ಷಕರಿಗೂ ಅತ್ಯಂತ ಭಾವುಕ ಕ್ಷಣ.

ರಾಯಚೂರು: ಶಿಕ್ಷಕ ಮತ್ತು ಮಕ್ಕಳ ಬಾಂಧವ್ಯವೇ ಹೀಗೆ. ಗ್ರಾಮೀಣ ಭಾಗಗಳ ಸರ್ಕಾರೀ ಶಾಲೆಗಳಲ್ಲಿ ಓದುವ ಮಕ್ಕಳು ಶಿಕ್ಷಕರನ್ನು ತುಂಬಾ ಹಚ್ಚಿಕೊಂಡು ಬಿಡುತ್ತವೆ. ಶಿಕ್ಷಕರ ವರ್ಗಾವಣೆಯಾದಾಗ (transfer) ಅವರು ತೀವ್ರ ಭಾವುಕರಾಗಿಬಿಡುತ್ತಾರೆ. ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಜಲದುರ್ಗದಲ್ಲಿ (Janadurga) ಇಂದು ಬೆಳಗ್ಗೆ ಸನ್ನಿವೇಶ ವಿಡಿಯೋದಲ್ಲಿದೆ. ಇಲ್ಲಿ ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಮಹೇಶ್ ಕುಮಾರ್ ಗೆ (Mahesh Kumar) ಯಳಗುಂದ ಸರಕಾರಿ ಪ್ರಾಥಮಿಕ ಶಾಲೆಗೆ ಟ್ರಾನ್ಸಫರ್ ಆಗಿದೆ. ಅವನರನ್ನು ಬೀಳ್ಕೋಡುವುದು ಮಕ್ಕಳಿಗೆ ಸುತಾರಂ ಇಷ್ಟವಿಲ್ಲ. ನಮ್ಮನ್ನು ಬಿಟ್ಟು ಹೋಗಬೇಡಿ ಅಂತ ಮಕ್ಕಳು ಗೋಗರೆಯುತ್ತಿವೆ. ಮಕ್ಕಳು ತಬ್ಬಿಕೊಂಡು ಅಳುತ್ತಿರುವುದರಿಂದ ಶಿಕ್ಷಕರಿಗೂ ಅತ್ಯಂತ ಭಾವುಕ ಕ್ಷಣ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.