Belagavi News: ಬತ್ತಿದ ಘಟಪ್ರಭಾ ನದಿ; ನೀರಿಲ್ಲದೆ ಮೀನುಗಳ ಸಾವು

Belagavi News: ಬತ್ತಿದ ಘಟಪ್ರಭಾ ನದಿ; ನೀರಿಲ್ಲದೆ ಮೀನುಗಳ ಸಾವು

ಕಿರಣ್ ಹನುಮಂತ್​ ಮಾದಾರ್
|

Updated on: Jun 24, 2023 | 1:14 PM

ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಹಿನ್ನೆಲೆ ಘಟಪ್ರಭಾ ನದಿ ಸಂಪೂರ್ಣವಾಗಿ ಬತ್ತಿ ಹೋಗಿದೆ. ಈ ಹಿನ್ನಲೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ನಲ್ಲಾನಟ್ಟಿ, ಬಳೋಬಾಳ, ಬೀರನಗಟ್ಟಿ ಬಳಿಯ ನದಿಯಲ್ಲಿ ಮೀನುಗಳ ಸಾವನ್ನಪ್ಪುತ್ತಿವೆ.

ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ನಲ್ಲಾನಟ್ಟಿ ಗ್ರಾಮದಲ್ಲಿರುವ ಘಟಪ್ರಭಾ ನದಿ(Ghataprabha River)ಯಲ್ಲಿ ನೀರಿಲ್ಲದೇ ಮೀನುಗಳ ಸಾವನ್ನಪ್ಪಿದ್ದಾವೆ. ಈ ಬಾರಿ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಘಟಪ್ರಭಾ ಸಂಪೂರ್ಣವಾಗಿ ಬತ್ತಿದ್ದು, ಇದರಿಂದ ನಲ್ಲಾನಟ್ಟಿ, ಬಳೋಬಾಳ, ಬೀರನಗಟ್ಟಿ ಬಳಿ ನದಿಯಲ್ಲಿ ಮೀನುಗಳ ಸಾವೀಗೀಡಾಗಿದ್ದಾವೆ. ಈ ಹಿನ್ನಲೆ ಘಟಪ್ರಭಾ ನದಿಯಲ್ಲಿ ದುರ್ವಾಸನೆ ಬರುತ್ತಿದ್ದು, ನಲ್ಲಾನಟ್ಟಿ, ಬಳೋಬಾಳ ಗ್ರಾಮಗಳಲ್ಲಿ ರೋಗ ಹರಡುವ ಭೀತಿ ಎದುರಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ