ಮೈಸೂರು: ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ಆದಿವಾಸಿ ಸಾವು

ಹೆಚ್.ಡಿ ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದಾಗ, ಕೆಸರಿನಲ್ಲಿ ಸಿಲುಕಿ ಬಳ್ಳೆ ಹಾಡಿಯ ನಿವಾಸಿ ಮಾಸ್ತಿ(30) ಎಂಬಾತ ಸಾವನ್ನಪ್ಪಿದ್ದಾನೆ.

ಮೈಸೂರು: ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ಆದಿವಾಸಿ ಸಾವು
ಮೃತ ಯುವಕ
Follow us
|

Updated on:Apr 21, 2023 | 7:53 AM

ಮೈಸೂರು: ಹೆಚ್.ಡಿ ಕೋಟೆ ತಾಲೂಕಿನ ಕಬಿನಿ(Kabini) ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದಾಗ, ಕೆಸರಿನಲ್ಲಿ ಸಿಲುಕಿ ಬಳ್ಳೆ ಹಾಡಿಯ ನಿವಾಸಿ ಮಾಸ್ತಿ(30) ಎಂಬಾತ ಸಾವನ್ನಪ್ಪಿದ್ದಾನೆ. ಐವರು ಸೇರಿ ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದು, ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಬಂದಿದ್ದಾರೆ. ಅವರನ್ನ ಕಂಡು ಭಯದಿಂದ ಕಾಲ್ಕಿತ್ತಿದ್ದಾರೆ. ಹೀಗೆ ಓಡುತ್ತಿದ್ದಾಗ ಮಾಸ್ತಿ ಎಂಬಾತ ಹಿನ್ನೀರಿನ ಕೆಸರಿನಲ್ಲಿ ಸಿಲುಕಿ ಸಾವಿಗೀಡಾಗಿದ್ದಾನೆ. ನಾಗರಹೊಳೆ ಅರಣ್ಯ ವ್ಯಾಪ್ತಿಯ ಕಬಿನಿ ಹಿನ್ನೀರಿನ ಬಳಿ ಘಟನೆ ನಡೆದಿದ್ದು, ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೀದಿನಾಯಿಗಳಿಂದ 9 ವರ್ಷದ ಬಾಲಕನ ಮೇಲೆ ದಾಳಿ

ಕೋಲಾರ: ರಮಹತ್ ನಗರದ 9 ವರ್ಷದ ಜಾಫರ್ ಎಂಬ‌ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ತಡರಾತ್ರಿ ಮನೆಯಿಂದ‌ ಹೊರಬಂದ ಜಾಫರ್ ಮೇಲೆ ನಾಯಿಗಳು ಮುಗ್ಗಿಬಿದ್ದಿದ್ದು, ದೇಹದ ಎಲ್ಲೆಡೆ ಕಚ್ಚಿ ಗಾಯಗೊಳಿಸಿವೆ. ಈ ವೇಳೆ ಪೊಲೀಸ್ ಪೇದೆಯೊಬ್ಬರು ನಾಯಿಗಳಿಂದ‌ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಕೋಲಾರದ‌ ಖಾಸಗಿ ಆಸ್ಪತ್ರೆಗೆ ಬಾಲಕನನ್ನ ದಾಖಲು ಮಾಡಲಾಗಿದ್ದು, ಗಲ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ‌ಈ ಘಟನೆ ನಡೆದಿದೆ.

ಇದನ್ನೂ ಓದಿ:ಶ್ಯಾಮ್‌ ಪ್ರಸಾದ್‌ ಶಾಸ್ತ್ರಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ರಾಘವೇಶ್ವರ ಶ್ರೀ, ಕಲ್ಲಡ್ಕ ಭಟ್ ವಿರುದ್ಧದ ಪ್ರಕರಣ ರದ್ದು

ಗಾಲ್ಫ್ ಬಾಲ್ ಬಿದ್ದು ಕಾರಿನ ಗಾಜು ಜಖಂ, ಚಾಲಕನಿಗೆ ಗಾಯ

ಬೆಂಗಳೂರು: ಚಲಿಸುತ್ತಿದ್ದ ಕಾರಿನ ಮುಂಭಾಗದ ಗ್ಲಾಸ್ ಮೇಲೆ ಗಾಲ್ಫ್ ಬಾಲ್ ಬಿದ್ದು ಕಾರಿನ ಗಾಜು ಜಖಂ ಆಗಿದ್ದು, ಚಾಲಕನಿಗೆ ಗಾಯವಾಗಿರುವಂತಹ ಘಟನೆ ನಿನ್ನೆ(ಏ.20) ಬೆಳಗ್ಗೆ 10:30ರ ವೇಳೆಗೆ ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್ ಬಳಿ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದ ವಕೀಲ ಗಿರೀಶ್ ದೂರಿನ ಮೇರೆಗೆ ಗಾಲ್ಫ್ ಆಡಳಿತ ಮಂಡಳಿ ಹಾಗೂ ಆಟಗಾರರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸೇಬಿಗಾಗಿ ಮುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಲಾಠಿಚಾರ್ಜ್​​ ಮಾಡಿರುವಂತಹ ಘಟನೆ ನೆಲಮಂಗಲದಲ್ಲಿ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮುಖಂಡರು ಆ್ಯಪಲ್​ ಹಾರ ಹಾಕಿದ್ದರು. ಈ ವೇಳೆ ಹಾರದಲ್ಲಿದ್ದ ಸೇಬು ಕಿತ್ತುಕೊಳ್ಳಲು ಕಾರ್ಯಕರ್ತರ ನಡುವೆ ತಳ್ಳಾಟ ಉಂಟಾಗಿದೆ. ಹಾಗಾಗಿ ಲಾಠಿ ಪ್ರಹಾರ ನಡೆಸಿ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:53 am, Fri, 21 April 23