Ballari: ಸುದ್ದಿಗೋಷ್ಟಿ ನಡೆಸುತ್ತಿದ್ದ ನಳಿನ್ ಕುಮಾರ್ ಕಟೀಲ್ರನ್ನು ಇಕ್ಕಟ್ಟಿನ ಸ್ಥಿತಿಗೆ ನೂಕಿದ ಬಳ್ಳಾರಿ ಪತ್ರಕರ್ತರು!
ನೀವು ತಡವಾಗಿ ಗೋಷ್ಟಿಗೆ ಬಂದಿದ್ದು ಅಂತ ಪತ್ರಕರ್ತರು ಹೇಳಿದಾಗ, ನಾನು ಅಗಲೇ ಬಂದು ನಿಮಗೋಸ್ಕರ ಕಾಯುತ್ತಿದ್ದೆ ಎಂದು ಕಟೀಲ್ ಸಮಜಾಯಿಷಿ ನೀಡುವ ಪ್ರಯತ್ನ ಮಾಡುತ್ತಾರೆ.
ಬಳ್ಳಾರಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಪತ್ರಿಕಾ ಗೋಷ್ಟಿಯಲ್ಲಿ ಇಂಥ ಪರಿಸ್ಥಿತಿ ಈ ಮೊದಲು ಯಾವತ್ತೂ ಎದುರಿಸಿರಲಿಕ್ಕಿಲ್ಲ. ಜಲಜೀವನ್ ಮಿಶನ್ ಬಗ್ಗೆ ಕಟೀಲ್ ಕೊಚ್ಚಿಕೊಳ್ಳಲಾರಂಭಿಸಿದ ಬಳಿಕ ಬಳ್ಳಾರಿ ನಗರದ ಮಾಧ್ಯಮ ಪ್ರತಿನಿಧಿಗಳು (media persons) ಅವರಿಗೆ ಅಕ್ಷರಶಃ ಮಾತಾಡಲು ಅವಕಾಶ ನೀಡದೆ ಪ್ರಶ್ನೆಗಳ ಸುರಿಮಳೆಗೈದರು. ಈ ಯೋಜನೆಯಡಿ ಜಿ್ಲ್ಲೆಯ ಒಂದೇ ಒಂದು ಗ್ರಾಮಕ್ಕೆ ಒಂದು ಹನಿ ನೀರು ಇದುವರೆಗೆ ಸಿಕ್ಕಿಲ್ಲ ಎಂದು ಪತ್ತಕರ್ತರು ಹೇಳಿದರು. ಒಬ್ಬ ಪತ್ರಕರ್ತರಂತೂ ಪ್ರಶ್ನೆಗೆ ಉತ್ತರ ನೀಡಿ ಸರ್, ನಿಮ್ಮ ಉಪನ್ಯಾಸ (lecture) ಬೇಕಿಲ್ಲ ಎನ್ನುತ್ತಾರೆ. ನಾನ್ ಹೇಳೋದ್ ಕೇಳಿ, ನಿಮ್ಮ ಎಲ್ಲ ಪ್ರಶ್ನೆಗಳು ಉತ್ತರಿಸಲೆಂದೇ ನಾನ್ ಬಂದಿರೋದು, ಅಂತ ಕಟೀಲ್ ಹೇಳಿದರೂ ಪತ್ರಕರ್ತರು ಅವರಿಗೆ ಮಾತಾಡುವ ಅವಕಾಶ ನೀಡಲಿಲ್ಲ, ನೀವು ಗೋಷ್ಟಿಗೆ ಬಂದಿದ್ದೇ ಅರ್ಧ ಗಂಟೆ ಲೇಟು ಅಂತ ತರಾಟೆಗೆ ತೆಗೆದುಕೊಳ್ಳುತ್ತಾರೆ. ನಾನು ಅಗಲೇ ಬಂದು ನಿಮಗೋಸ್ಕರ ಕಾಯುತ್ತಿದ್ದೆ ಎಂದು ಕಟೀಲ್ ಸಮಜಾಯಿಷಿ ನೀಡುವ ಪ್ರಯತ್ನ ಮಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

