ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಆಪ್ ಪ್ರವೇಶ ಕಾಂಗ್ರೆಸ್ ಪಕ್ಷದ ವೋಟುಗಳ ಮೇಲೆ ದೊಡ್ಡ ಪರಿಣಾಮ ಬೀರಿತು: ಸಿದ್ದರಾಮಯ್ಯ
ಅಸೆಂಬ್ಲಿ ಚುನಾವಣೆಗಳು ಆಯಾ ರಾಜ್ಯಗಳ ಪ್ರಾದೇಶಿಕ ಸಮಸ್ಯೆಗಳ ಆಧಾರದಲ್ಲಿ ನಡೆಯುತ್ತವೆ ಎಂದ ಸಿದ್ದರಾಮಯ್ಯ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಜಾಸ್ತಿಯಿದೆ ಅಂತ ಹೇಳಿದರು.
ಮೈಸೂರು: ಗುಜರಾತ ವಿಧಾನ ಸಭಾ ಚುನಾವಣೆಯಲ್ಲಿ (Gujarat Assembly Polls) ಕಾಂಗ್ರೆಸ್ ಪಕ್ಷದ ನೀರಸ ಪ್ರದರ್ಶನಕ್ಕೆ ಆಪ್ (AAP) ಪಕ್ಷದ ಎಂಟ್ರಿ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮೈಸೂರಲ್ಲಿ ಇಂದು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಆಪ್ ಪಕ್ಷದ ಎಂಟ್ರಿಯಿಂದಾಗಿ ತಮ್ಮ ಪಕ್ಷಕ್ಕೆ ಸಿಗಬೇಕಿದ್ದ ವೋಟುಗಳು ಒಡೆದು ಆ ಪಕ್ಷದ ಪಾಲಾದವು ಎಂದರು. ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ, ಅಸೆಂಬ್ಲಿ ಚುನಾವಣೆಗಳು ಆಯಾ ರಾಜ್ಯಗಳ ಪ್ರಾದೇಶಿಕ ಸಮಸ್ಯೆಗಳ ಆಧಾರದಲ್ಲಿ ನಡೆಯುತ್ತವೆ ಎಂದ ಸಿದ್ದರಾಮಯ್ಯ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಜಾಸ್ತಿಯಿದೆ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ