Republic Day Parade: ನಾರಿಶಕ್ತಿ ಸ್ತಬ್ಧಚಿತ್ರ ಪ್ರದರ್ಶನ ಅನುಮತಿ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ!

|

Updated on: Jan 25, 2023 | 12:26 PM

ಪದ್ಮಶ್ರೀ ತುಳಸಿ ಗೌಡ, ಸಾಲುಮರದ ತಿಮ್ಮಕ್ಕ ಮತ್ತು ಪಾವಗಡದ ನರಸಮ್ಮ ಅವರ ಪ್ರತಿಕೃತಿಗಳನ್ನು ಹೊತ್ತ ಟ್ಯಾಬ್ಲೋ ನಾಳೆ ಕರ್ತವ್ಯ ಪಥದಲ್ಲಿ ಸಾಗುತ್ತಾ ನಮ್ಮಲ್ಲಿ ರೋಮಾಂಚನ ಹುಟ್ಟಿಸಲಿದೆ.

ಕಾರವಾರ:  ನಾಳೆ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಕರ್ತವ್ಯಪಥ್ ನಲ್ಲಿ ನಡೆಯಲಿರುವ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ (tableau) ಪ್ರದರ್ಶನಕ್ಕೆ ಅವಕಾಶ ಸಿಗದಿದ್ದಾಗ ವಿವಾದ ಸೃಷ್ಟಿಯಾಗಿದ್ದು ನಿಮಗೆ ಗೊತ್ತಿದೆ. ಆದರೆ ಕೊನೆಘಳಿಗೆಯಲ್ಲಿ ರಾಜ್ಯದ ನಾರಿ ಶಕ್ತಿ ಸ್ತಬ್ಧಚಿತ್ರಕ್ಕೆ ಅನುಮತಿ ಸಿಕ್ಕಿದ್ದು ಕನ್ನಡಿಗರಲ್ಲಿ ಅತೀವ ಸಂತೋಷವನ್ನುಂಟು ಮಾಡಿದೆ. ನಾಡಿನ ಮಾದರಿ ಮಹಿಳೆಯರು ಮತ್ತು ಎಲ್ಲ ಕನ್ನಡರಿಗೆ ಪ್ರೇರಣಾದಾಯಕರಾಗಿರುವ ಪರಿಸರ ಪ್ರೇಮಿಗಳು-ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಪದ್ಮಶ್ರೀ ಪ್ರಶಸ್ತಿ ವಿಜೇತೆ ತುಳಸಿ ಗೌಡ (Padma Shri Tulsi Gowda), ಸಾಲುಮರದ ತಿಮ್ಮಕ್ಕ (Salumarada Timmakka) ಮತ್ತು ಕಳೆದ 70 ವರ್ಷಗಳಿಂದ ಸೂಲಗಿತ್ತಿಯಾಗಿ ಸಾವಿರಾರು ಹೆರಿಗೆಗಳನ್ನು ಮಾಡಿಸಿರುವ ಪಾವಗಡದ ನರಸಮ್ಮ (Narsamma) ಅವರ ಪ್ರತಿಕೃತಿಗಳನ್ನು ಹೊತ್ತ ಟ್ಯಾಬ್ಲೋ ನಾಳೆ ಕರ್ತವ್ಯ ಪಥದಲ್ಲಿ ಸಾಗುತ್ತಾ ನಮ್ಮಲ್ಲಿ ರೋಮಾಂಚನ ಹುಟ್ಟಿಸಲಿದೆ. ಈ ಹಿನ್ನೆಲೆಯಲ್ಲಿ ಟಿವಿ9 ಕಾರವಾರ ಪ್ರತಿನಿಧಿ ತುಳಸೀ ಗೌಡ ಅವರೊಂದಿಗೆ ಮಾತಾಡಿದಾಗ ಅವರು ಸಂಭ್ರಮ ವ್ಯಕ್ತಪಡಿಸಿದರು. ಅವರ ಮಾತುಗಳನ್ನು ಕೇಳಿಸಿಕೊಳ್ಳಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ