ಮುಖ್ಯಮಂತ್ರಿಯಾಗಿದ್ದಾಗ ವಿರೋಧ ಪಕ್ಷ ಮಾಡಿದ್ದ 8 ಅರೋಪಗಳನ್ನು ಸಿಬಿಐಗೆ ಒಪ್ಪಿಸಿದ್ದೆ, ಈ ಸರ್ಕಾರ ಒಂದಾದರೂ ನೀಡಿದೆಯಾ? ಸಿದ್ದರಾಮಯ್ಯ
ತಾನು ಮುಖ್ಯಮಂತ್ರಿಯಾಗಿದ್ದಾಗ ಎಂಟು ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದೆ ಎಂದು ಹೇಳಿದ ಅವರು ಬಿಜೆಪಿ ಸರ್ಕಾರ ಒಂದಾದರೂ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ನೀಡಿದೆಯಾ ಎಂದರು.
ಬೆಂಗಳೂರು: ತನ್ನ ಹಾಗೂ ತನ್ನ ನೇತೃತ್ವದ ಸರ್ಕಾರದ ವಿರುದ್ಧ ಆರೋಪಗಳಿದ್ದರೆ, ಕಳೆದ ಮೂರೂವರೆ ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಯಾಕೆ ಸುಮ್ಮನಿತ್ತು? ಅದಕ್ಕೂ ಮೊದಲು 5 ವರ್ಷಗಳ ಕಾಲ ವಿರೋಧ ಪಕ್ಷ್ದದಲ್ಲಿದ್ದ ಬಿಜೆಪಿ ನಾಯಕರು ಕಳ್ಳೆಪುರಿ ತಿಂತಿದ್ರಾ? ಅವರ ಬಾಯಲ್ಲಿ ಕಡುಬು ಸಿಕ್ಹಾಕಿಕೊಂಡಿತ್ತಾ? ಎಂದು ಸಿದ್ದರಾಮಯ್ಯ (Siddaramaiah) ಬುಧವಾರ ಬೆಂಗಳೂರಲ್ಲಿ ಕೇಳಿದರು. ತಾನು ಮುಖ್ಯಮಂತ್ರಿಯಾಗಿದ್ದಾಗ ಎಂಟು ಪ್ರಕರಣಗಳನ್ನು ಸಿಬಿಐ ತನಿಖೆಗೆ (CBI investigation) ಒಪ್ಪಿಸಿದ್ದೆ ಎಂದು ಹೇಳಿದ ಅವರು ಬಿಜೆಪಿ ಸರ್ಕಾರ (BJP government) ಒಂದಾದರೂ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ನೀಡಿದೆಯಾ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos