ಸಿಎಂಗೆ ಸರ್ಕಾರ ಬಿದ್ದು ಹೋಗುವ ಭಯ ಯಾಕೆ? ಈಶ್ವರ್ ಖಂಡ್ರೆ ಪ್ರಶ್ನೆ
100 ದಿನಗಳ ಹಿಂದೆ ಖಾಲಿ ಹುದ್ದೆಗಳನ್ನ ಭರ್ತಿ ಮಾಡುತ್ತೇವೆ ಅಂತ ಹೇಳಿದ್ದರು. ಆದರೆ ಈ ಕೆಲಸ ಆಗಿಲ್ಲ. ಈ ಸದನಕ್ಕೆ ಬೆಲೆ ಇಲ್ವಾ? ಅಂತ ಪ್ರಶ್ನಿಸಿದ್ದಾರೆ. ಜೊತೆಗೆ ಸಿಎಂಗೆ ಸರ್ಕಾರ ಬಿದ್ದು ಹೋಗುವ ಹೆದರಿಕೆ ಯಾಕೆ ಅಂತ ಕೇಳಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬುಧವಾರ ವಿಧಾನಸಭೆ ಭಾರೀ ಚರ್ಚೆಗೆ ಸಾಕ್ಷಿಯಾಯಿತು. ಸಭಾಪತಿಗಳು ಸಭೆಯಲ್ಲಿ ಎಲ್ಲರಿಗೂ ಮಾತನಾಡುವುದಕ್ಕೆ ಅವಕಾಶ ಕೊಡುತ್ತೇನೆ. ಆದರೆ ಬೇಗ ಬೇಗ ನಿಮ್ಮ ವಿಚಾರಗಳನ್ನ ಸಭೆಯಲ್ಲಿ ತಿಳಿಸಿ ಅಂತ ಹೇಳಿದರು. ಮೊದಲಿಗೆ ಮಾತನಾಡಿದ ಈಶ್ವರ ಖಂಡ್ರೆ, ಹಿಂದೆ ಸರ್ಕಾರ ನೀಡಿದ್ದ ಭರವಸೆಗಳಲ್ಲಿ ಒಂದಾದರೂ ಈಡೇರಿಸಿದ್ಯಾ ಅಂತ ಪ್ರಶ್ನಿಸಿದರು. ಈ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಿ. ನಾನು ಈ ಬಗ್ಗೆ ಟೀಕೆ ಮಾಡುತ್ತಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ಉತ್ತರಿಸಬೇಕು ಅಂದರು. 100 ದಿನಗಳ ಹಿಂದೆ ಖಾಲಿ ಹುದ್ದೆಗಳನ್ನ ಭರ್ತಿ ಮಾಡುತ್ತೇವೆ ಅಂತ ಹೇಳಿದ್ದರು. ಆದರೆ ಈ ಕೆಲಸ ಆಗಿಲ್ಲ. ಈ ಸದನಕ್ಕೆ ಬೆಲೆ ಇಲ್ವಾ? ಅಂತ ಪ್ರಶ್ನಿಸಿದ್ದಾರೆ. ಜೊತೆಗೆ ಸಿಎಂಗೆ ಸರ್ಕಾರ ಬಿದ್ದು ಹೋಗುವ ಹೆದರಿಕೆ ಯಾಕೆ ಅಂತ ಕೇಳಿದರು.
ಇದನ್ನೂ ಓದಿ
Shruti Haasan: ಶೃತಿ ಹಾಸನ್ ಕೇವಲ ಅಭಿನೇತ್ರಿಯಲ್ಲ, ಮತ್ತೆ? ಅಪರೂಪದ ಪ್ರತಿಭೆ ಕುರಿತ ಅಚ್ಚರಿಯ ವಿಚಾರ ಇಲ್ಲಿದೆ