ಬಹಳ ದಿನಗಳ ನಂತರ ಮಾಧ್ಯಮಗಳಿಗೆ ಸಿಕ್ಕ ಈಶ್ವರಪ್ಪನವರು ವಿಜಯೇಂದ್ರ ಬಗ್ಗೆ ಕೇಳಿದಾಗ ಸಿಡಿಮಿಡಿಗೊಂಡರು!
ಪಕ್ಷದ ಕಾರ್ಯಕರ್ತನಾಗಿ ದುಡಿಯುವೆ ಅಂತ ಖುದ್ದು ವಿಜಯೇಂದ್ರ ಹೇಳಿದ್ದಾರೆ. ಆದರೂ ನಿಮಗೆ ಸಮಾಧಾನವಿಲ್ಲ. ಕೇಳಿದ್ದನ್ನೇ ಕೇಳುವುದನ್ನು ನೀವು ಬಿಡಬೇಕು. ಪಕ್ಷದಲ್ಲಿ 30-40 ವರ್ಷಗಳಿಂದ ದುಡಿಯುತ್ತಿರುವ ಕಾರ್ಯಕರ್ತರಿದ್ದಾರೆ. ನಮಗ್ಯಾಕೆ ಟಿಕೆಟ್ ಕೊಟ್ಟಿಲ್ಲ ಅವರು ಕೇಳುತ್ತಿದ್ದಾರೆಯೇ? ಎಂದು ಈಶ್ವರಪ್ಪ ಹೇಳಿದರು.
Bagalkot: ಮಾಜಿ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಕೆ ಎಸ್ ಈಶ್ವರಪ್ಪನವರು (KS Eshwarappa) ಬಹಳ ದಿನಗಳ ನಂತರ ಮಾಧ್ಯಮದವರೊಂದಿಗೆ ಮಾತಾಡಿದರು. ಗುರುವಾರ ಬಾಗಲಕೋಟೆಗ (Bagalkot) ಭೇಟಿ ನೀಡಿದ್ದ ಈಶ್ವರಪ್ಪನವರ ಮೂಡು ಸ್ವಲ್ಪ ಸರಿಯಿರಲಿಲ್ಲ ಅನಿಸುತ್ತದೆ. ಯಾಕೆಂದರೆ, ಬಿ ವೈ ವಿಜಯೇಂದ್ರ (BY Vijayendra) ಅವರಿಗೆ ವಿಧಾನ ಪರಿಷತ್ ಚುನಾವಣೆಗ ಟಿಕೆಟ್ ಸಿಗದ ಬಗ್ಗೆ ಪ್ರಶ್ನೆ ಕೇಳಿದ ಕೂಡಲೇ ಅಸಮಾಧಾನಗೊಂಡರು. ನಿಮಗೆ ಕೇಳಲು ಬೇರೆ ಪ್ರಶ್ನೆ ಇಲ್ವಾ? ಯಾಕೆ ಪದೇಪದೆ ಈ ಪ್ರಶ್ನೆ ಕೇಳುತ್ತೀರಿ ಅಂತ ಪತ್ರಕರ್ತರ ಮೇಲೆ ಹರಿಹಾಯ್ದರು. ವಿಷಯದ ಬಗ್ಗೆ ಬಿ ಎಸ್ ಯಡಿಯೂರಪ್ಪನವರ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಗಳಿಗೆ ವಿಜಯೇಂದ್ರ ಮತ್ತು ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಈಶ್ವರಪ್ಪ ಹೇಳಿದರು.
ಪತ್ರಕರ್ತರೆಲ್ಲ ರಾಘವೇಂದ್ರನ ಜಪ ಮಾಡುವ ಬದಲು ವಿಜಯೇಂದ್ರನ ಜಪ ಮಾಡುತ್ತಿರುವಿರಿ. ಮಾಡಿಕೊಳ್ಳಿ, ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ, ಪಕ್ಷದ ಕಾರ್ಯಕರ್ತನಾಗಿ ದುಡಿಯುವೆ ಅಂತ ಖುದ್ದು ವಿಜಯೇಂದ್ರ ಹೇಳಿದ್ದಾರೆ. ಆದರೂ ನಿಮಗೆ ಸಮಾಧಾನವಿಲ್ಲ. ಕೇಳಿದ್ದನ್ನೇ ಕೇಳುವುದನ್ನು ನೀವು ಬಿಡಬೇಕು. ಪಕ್ಷದಲ್ಲಿ 30-40 ವರ್ಷಗಳಿಂದ ದುಡಿಯುತ್ತಿರುವ ಕಾರ್ಯಕರ್ತರಿದ್ದಾರೆ. ನಮಗ್ಯಾಕೆ ಟಿಕೆಟ್ ಕೊಟ್ಟಿಲ್ಲ ಅವರು ಕೇಳುತ್ತಿದ್ದಾರೆಯೇ? ಎಂದು ಈಶ್ವರಪ್ಪ ಹೇಳಿದರು.
ಲಿಂಗರಾಜ ಪಾಟೀಲ ಬಗ್ಗೆ ನೀವು ಯಾಕೆ ಪ್ರಶ್ನೆ ಕೇಳುವುದಿಲ್ಲ. ಕೇಳಲು ನಿಮ್ಮಲ್ಲಿ ನೂರಾರು ಪ್ರಶ್ನೆಗಳಿವೆ, ಅದರೆ ಅವುಗಳನ್ನು ಕೇಳುವುದು ನಿಮಗೆ ಬೇಕಿಲ್ಲ, ವಿಜಯೇಂದ್ರನ ಬಗ್ಗೆಯೇ ಕೇಳಬೇಕು, ಹೌದು ತಾನೆ? ನೀವು ಯಾವ ರಾಜಕಾರಣಿಗಳಿಗೂ ಕಮ್ಮಿಯಿಲ್ಲ ಎಂದು ಹೇಳಿದಾಗ ಪತ್ರಕರ್ತರು ಗೊಳ್ಳೆಂದು ನಕ್ಕರು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.