ಮೈಸೂರಲ್ಲಿ ಕುಸಿದ ಕಟ್ಟಡಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಪಾಲಿಕೆ ಕ್ರಮ ತೆಗದುಕೊಳ್ಳಲಾಗುತ್ತಿಲ್ಲ
ಸದರಿ ಸ್ಥಳವು ಮೈಸೂರು ನಗರದ ಹೃದಯ ಭಾಗದಲ್ಲಿರುವುದರಿಂದ ಮತ್ತು ಅದಾಗಲೇ ಶಿಥಿಲಗೊಂಡಿದ್ದರಿಂದ ಸ್ಥಳೀಯರು ಮೈಸೂರು ಮಹಾನಗರ ಪಾಲಿಕೆಗೆ ದೂರು ನೀಡಿದ್ದಾರೆ. ಆದರೆ ಜಾಗಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯನಲ್ಲಿರುವುದರಿಂದ ಪಾಲಿಕೆ ಯಾವುದೇ ಕ್ರಮ ತೆಗೆದುಕೊಳ್ಳಲಾಗದ ಅಸಹಾಯಕತೆಯನ್ನು ಪ್ರದರ್ಶಿಸಿದೆ.
Mysuru: ಕೆಲ ದಿನಗಳ ಹಿಂದೆ ಮೈಸೂರು ನಗರದಲ್ಲಿ (Mysuru city ) ಸುರಿದ ಮಳೆ ಹಲವಾರು ಅನಾಹುತ ಸೃಷ್ಟಿಸಿರುವುದನ್ನು ನಾವು ವರದಿ ಮಾಡಿದ್ದೇವೆ. ಮಳೆಯ ಆರ್ಭಟ ಈಹ ಕಮ್ಮಿಯಾಗಿದೆ. ಅದರೆ ನಗರದಲ್ಲಿ ಕೆಲ ಹಳೆಯ ಮತ್ತು ಶಿಥಿಲಗೊಂಡಿದ್ದ (fragile) ಹಲವು ಕಟ್ಟಡಗಳು ಗಾಳಿಮಳೆಯಿಂದಾಗಿ ಕುಸಿದು ಬೀಳುವ ಸ್ಥಿತಿ ತಲುಪಿದ್ದವು. ಇಲ್ಲಿನ ಶಿವರಾಂ ಪೇಟೆಯಲ್ಲಿರುವ (Shivarampete) ಈ ಕಟ್ಟಡದ ಅರ್ಧಭಾಗ ಬುಧವಾರ ರಾತ್ರಿ ಕುಸಿದುಬಿದ್ದಿದೆ. ಟಿವಿ9 ಮೈಸೂರು ವರದಿಗಾರ ರಾಮ್ ಅವರು ನೀಡುವ ಮಾಹಿತಿ ಪ್ರಕಾರ ಕುಸಿದುಬಿದ್ದಿರುವ ಅಂಗಡಿ ಮತ್ತು ಜಾಗ ತ್ರಿಪುರಭೈರವಿ ಮಠಕ್ಕೆ ಸೇರಿದ್ದು ಮತ್ತು ಅದನ್ನು ವ್ಯಾಪಾರಸ್ಥರಿಗೆ ಬಾಡಿಗೆಗೆ ನೀಡಲಾಗಿತ್ತು. ಈ ಆಸ್ತಿ ಅಂಗಡಿ ಮಾಲೀಕರು ಮತ್ತು ಮಠದ ನಡುವೆ ನಡೆದ ಕಲಹದಿಂದಾಗಿ ವಿವಾದಿತ ಪ್ರದೇಶವಾಗಿದ್ದು ಪ್ರಕರಣ ನ್ಯಾಯಾಲಯದಲ್ಲಿದೆ.
ಸದರಿ ಸ್ಥಳವು ಮೈಸೂರು ನಗರದ ಹೃದಯ ಭಾಗದಲ್ಲಿರುವುದರಿಂದ ಮತ್ತು ಅದಾಗಲೇ ಶಿಥಿಲಗೊಂಡಿದ್ದರಿಂದ ಸ್ಥಳೀಯರು ಮೈಸೂರು ಮಹಾನಗರ ಪಾಲಿಕೆಗೆ ದೂರು ನೀಡಿದ್ದಾರೆ. ಆದರೆ ಜಾಗಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯನಲ್ಲಿರುವುದರಿಂದ ಪಾಲಿಕೆ ಯಾವುದೇ ಕ್ರಮ ತೆಗೆದುಕೊಳ್ಳಲಾಗದ ಅಸಹಾಯಕತೆಯನ್ನು ಪ್ರದರ್ಶಿಸಿದೆ. ಜಾಗದ ಹಿಂಭಾಗದಲ್ಲಿ ಅಂಗಡಿಗಳಿಗೆ ಅಂಟಿಕೊಂಡಂತೆ ಆಂಜನೇಯನ ದೇವಸ್ಥಾನವಿದೆ ಮತ್ತು ಭಕ್ತಾದಿಗಳು ಕುಸಿದು ಬಿದ್ದಿರುವ ಕಟ್ಟಡದ ಪಕ್ಕದಲ್ಲೇ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದರು. ಆದರೆ ಕುಸಿತ ರಾತ್ರಿ ಸಮಯ ಜರುಗಿರುವುದರಿಂದ ವಾಹನಗಳು ಜಖಂಗೊಳ್ಳುವ ಮತ್ತು ಜನರಿಗೆ ಗಾಯವಾಗುವ ಸಂಗತಿ ನಡೆದಿಲ್ಲ.
ಈ ಸ್ಥಳದಲ್ಲಿ ವಾಸವಾಗಿರುವ ಜನ ಪಾಲಿಕೆ ಮತ್ತು ಎಲ್ಲ ಸಂಬಂಧಪಟ್ಟವರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಅವರ ಆತಂಕ ಆರ್ಥವಾಗುವಂಥದ್ದೇ. ಯಾಕೆಂದರೆ, ಹಗಲು ಸಮಯದಲ್ಲಿ ಕಟ್ಟಡ ಕುಸಿದಿದ್ದರೆ ಜನ ಗಾಯಗೊಳ್ಳುವ ಸಾಧ್ಯತೆ ಇತ್ತು. ಹಾಗೆಯೇ, ಈಗಲೂ ಕಟ್ಟಡದ ಉಳಿದರ್ಧ ಭಾಗ ಯಾವುದೇ ಕ್ಷಣ ಕುಸಿಯಬಹುದು. ಹಾಗಾಗಿ, ಪಾಲಿಕೆ ಕೋರ್ಟಿನ ಮೊರೆಹೊಕ್ಕು ಸಮಸ್ಯೆಯನ್ನು ಕೊನೆಗಾಣಿಸಬೇಕು ಎಂದು ಅವರು ಹೇಳುತ್ತಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.