ಪಕ್ಷದ ಕಚೇರಿಯಲ್ಲಿ ಗಂಗಾಜಲ ಕಳಸ ಪ್ರತಿಷ್ಠಾಪನೆ ಮಹಾಪೂಜೆ ನೆರವೇರಿಸಿದರು ಕುಮಾರಸ್ವಾಮಿ
ಕಚೇರಿಯ ಮುಂದೆ ಸುಮಾರು 500 ಲೀಟರ್ ಸಾಮರ್ಥ್ಯದ ಕಳಸವನ್ನು ಪ್ರತಿಷ್ಠಾಪಿಸಿ ಅದರಲ್ಲಿ ನದಿಗಳ ನೀರನ್ನು ತುಂಬಿಸಿ ಇಡಲಾಗಿದೆ. ನದಿಗಳ ಹೆಸರಲ್ಲಿ ಚಿಕ್ಕಗಾತ್ರದ ಕಳಸಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಒಂದು ವಿಶಿಷ್ಟ ತಂತ್ರಜ್ಞಾನದ ಮೂಲಕ ನೀರು ಕೆಡದ ಹಾಗೆ ನೋಡಿಕೊಳ್ಳುವ ಏರ್ಪಾಟು ಸಹ ಮಾಡಲಾಗಿದೆಯಂತೆ.
ಬೆಂಗಳೂರು: ನಮ್ಮ ರಾಜ್ಯದ ಮಾತ್ರವಲ್ಲ ರಾಷ್ಟ್ರದ ಎಲ್ಲ ರಾಜಕೀಯ ಧುರೀಣರು ಧಾರ್ಮಿಕ ಮನೋಭಾವದವರು. ಚುನಾವಣಾ ವರ್ಷದಲ್ಲಿ ಅಥವಾ ಅದು ಹತ್ತಿರಗೊಳ್ಳುವಾಗ ಅವರಲ್ಲಿ ಧಾರ್ಮಿಕತೆ, ಧಾರ್ಮಿಕ ಮನೋಭಾವ ಮತ್ತಷ್ಟು ಹೆಚ್ಚುತ್ತದೆ. ಬಿಡಿ, ಧರ್ಮ, ನಂಬುಗೆ, ಆಚಾರ-ವಿಚಾರ ವ್ಯಕ್ತಿಗತವಾದದ್ದು, ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಮಾಜಿ ಮುಖ್ಯಮಂತ್ರಿ ಮತ್ತು ಜೆಡಿ(ಎಸ್) ನಾಯಕ ಹೆಚ್ ಡಿ ಕುಮಾರ ಸ್ವಾಮಿಯವರು (HD Kumaraswamy) ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಜನತಾ ಜಲಧಾರೆ (Janatha Jaladhare) ಕಾರ್ಯಕ್ರಮ ಸಂದರ್ಭದಲ್ಲಿ ರಾಜ್ಯದ ಬೇರೆ ಬೇರೆ ನದಿಗಳಿಂದ (Rivers) ಸಂಗ್ರಹಿಸಲಾಗಿದ್ದ ನೀರಿನಿಂದ ಪವಿತ್ರ ಗಂಗಾಜಲ ಕಳಸ ಪ್ರತಿಷ್ಠಾಪನೆಯ ಮಹಾಪೂಜಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸುಮಾರು ಹದಿನೈದು ಅರ್ಚಕರು ಪೂಜಾವಿಧಿ ಮತ್ತು ಹೋಮ ನೆರವೇರಿಸುತ್ತಿರುವದನ್ನು ವಿಡಿಯೋನಲ್ಲಿ ನೋಡಬಹುದು.
ಕಚೇರಿಯ ಮುಂದೆ ಸುಮಾರು 500 ಲೀಟರ್ ಸಾಮರ್ಥ್ಯದ ಕಳಸವನ್ನು ಪ್ರತಿಷ್ಠಾಪಿಸಿ ಅದರಲ್ಲಿ ನದಿಗಳ ನೀರನ್ನು ತುಂಬಿಸಿ ಇಡಲಾಗಿದೆ. ನದಿಗಳ ಹೆಸರಲ್ಲಿ ಚಿಕ್ಕಗಾತ್ರದ ಕಳಸಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಒಂದು ವಿಶಿಷ್ಟ ತಂತ್ರಜ್ಞಾನದ ಮೂಲಕ ನೀರು ಕೆಡದ ಹಾಗೆ ನೋಡಿಕೊಳ್ಳುವ ಏರ್ಪಾಟು ಸಹ ಮಾಡಲಾಗಿದೆಯಂತೆ.
ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮುಂಬರುವ ಚುನಾವಣೆ ಮುಗಿಯುವರೆಗೆ ಪ್ರತಿದಿನ ಗಂಗಾಪೂಜೆ ನಡೆಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ನಿಮಗೆ ಪ್ರಾಯಶಃ ನೆನಪಿರಬಹುದು, ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನ ಆಗ್ರಹಿಸಿ ಪಾದಯಾತ್ರೆ ನಡೆಸಿದಾಗ ಕುಮಾರಸ್ವಾಮಿ ಜನತಾ ಜಲಧಾರೆ ಕಾರ್ಯಕ್ರಮ ಆಯೋಜಿಸಿದರು. ಏಪ್ರಿಲ್ 16, ಹನುಮ ಜಯಂತಿಯಂದು ಆರಂಭವಾದ ಕಾರ್ಯಕ್ರಮ ಮೇ 13 ರಂದು ನೆಲಮಂಗಲದಲ್ಲಿ ನಡೆದ ಮಹಾಸಂಕಲ್ಪ ಸಮಾವೇಶದೊಂದಿಗೆ ಕೊನೆಗೊಂಡಿತ್ತು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.