ಮಂತ್ರಿ ಸ್ಥಾನ ಹೋಗಿದ್ದಕ್ಕೆ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿದ್ದೀರಾ ಕೇಳಿದ್ದಕ್ಕೆ ಈಶ್ವರಪ್ಪನವರಿಗೆ ಭಯಂಕರ ರೇಗಿತು!
ಡಿಗ್ರಿ ಪಡೆದ ಬಳಿಕ ಬಿಜೆಪಿ ಪಕ್ಷ ಸೇರಿದವನು ಈಗಲೂ ಇದೇ ಪಕ್ಷದಲ್ಲಿದ್ದೇನೆ ಮತ್ತು ಸಾಯುವವರೆಗೆ ಇದರಲ್ಲೇ ಮುಂದುವರಿಯುತ್ತೇನೆ ಎಂದು ಈಶ್ವರಪ್ಪ ಹೇಳಿದರು.
ಮೈಸೂರು: ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರಿಗೆ (KS Eshwarappa) ಮಂತ್ರಿ ಸ್ಥಾನ ಹೋದ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದರೆ ಇನ್ನಿಲ್ಲದ ಕೋಪ ಬರುತ್ತದೆ ಮಾರಾಯ್ರೇ. ಇಂದು ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವರು ಕಲಬುರಗಿಯಲ್ಲಿ (Kalaburagi) ಹಿಂದುಳಿದ ವರ್ಗಗಳ ಒಂದು ಬೃಹತ್ ಸಮಾವೇಶವನ್ನು (convention) ಆಯೋಜನೆ ಮಾಡಲಿರುವ ಬಗ್ಗೆ ಹೇಳಿದರು. ಪತ್ರಕರ್ತರೊಬ್ಬರು ಮಂತ್ರಿ ಸ್ಥಾನ ಹೋಯ್ತು ನಿಮ್ಮನ್ನು ಪಕ್ಷದ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೀರಾ ಅಂತ ಕೇಳಿದಾಗ ಅವರಿಗೆ ಭಯಂಕರ ರೇಗಿತು. ಕುಡುಕರ ಹಾಗೆ ಮಾತಾಡಿದರೆ ನಾನು ಉತ್ತರ ಕೊಡೋದಿಲ್ಲ, ಪಕ್ಷದ ಕಾರ್ಯಕರ್ತರಿಗೆ ಸ್ಥಾನಮಾನ ಮುಖ್ಯವಲ್ಲ, ಪಕ್ಷ ನಮಗೆ ತಾಯಿ ಇದ್ದ ಹಾಗೆ. ಡಿಗ್ರಿ ಪಡೆದ ಬಳಿಕ ಬಿಜೆಪಿ ಪಕ್ಷ ಸೇರಿದವನು ಈಗಲೂ ಇದೇ ಪಕ್ಷದಲ್ಲಿದ್ದೇನೆ ಮತ್ತು ಸಾಯುವವರೆಗೆ ಇದರಲ್ಲೇ ಮುಂದುವರಿಯುತ್ತೇನೆ ಎಂದು ಹೇಳಿದರು.
Published on: Sep 30, 2022 04:41 PM
Latest Videos