ಈಶ್ವರಪ್ಪನವರನ್ನು ಬಂಧಿಸಬೇಕಿತ್ತು ಅಲ್ವೇನ್ರೀ ಅಂತ ಪೊಲೀಸರನ್ನೇ ಕೇಳಿದರು ಸಿದ್ದರಾಮಯ್ಯ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 18, 2022 | 11:37 PM

ಸಿದ್ದರಾಮಯ್ಯನವರು ಮಾತಾಡುವಾಗ ಅದರಲ್ಲೂ ಬೇರೆ ಪಕ್ಷಗಳ ನಾಯಕರನ್ನು ಟೀಕಿಸುವಾಗ ಪ್ರ್ಯಾಕ್ಟಿಕಲ್ ಜೋಕ್ ಗಳನ್ನು ಕಟ್ ಮಾಡುತ್ತಾರೆ ಮತ್ತು ಜನ ಅವರ ಮಾತಿನ ವೈಖರಿಯನ್ನು ಎಂಜಾಯ್ ಮಾಡುತ್ತಾರೆ.

ಮಂಡ್ಯ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಸೋಮವಾರ ಮಂಡ್ಯನಲ್ಲಿ (Mandya) ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಪೊಲೀಸ್ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ ಪ್ರಸಂಗ ನಡೆಯಿತು. ಸಿದ್ದರಾಮಯ್ಯನವರು ಮಾತಾಡುವಾಗ ಅದರಲ್ಲೂ ಬೇರೆ ಪಕ್ಷಗಳ ನಾಯಕರನ್ನು ಟೀಕಿಸುವಾಗ ಪ್ರ್ಯಾಕ್ಟಿಕಲ್ ಜೋಕ್ ಗಳನ್ನು (practical jokes) ಕಟ್ ಮಾಡುತ್ತಾರೆ ಮತ್ತು ಜನ ಅವರ ಮಾತಿನ ವೈಖರಿಯನ್ನು ಎಂಜಾಯ್ ಮಾಡುತ್ತಾರೆ. ಈಶ್ವರಪ್ಪ ಅವರನ್ನು ಬಂಧಿಸಬೇಕು ಅಂತ ಮಾತಾಡುವಾಗ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ರಕ್ಷಿಸುತ್ತಿರುವುದು ಸತ್ಯ ಅಂತ ಹೇಳುತ್ತಾ ತಮ್ಮ ಬಲಭಾಗದಲ್ಲಿ ನಿಂತಿದ್ದ ಪೊಲೀಸರ ಕಡೆ ತಿರುಗಿ, ಈಶ್ವರಪ್ಪನವರ ಬಂಧನವಾಗಬೇಕಿತ್ತು, ಅಲ್ವೇನ್ರೀ ಪೊಲೀಸ್ನವರೇ? ಅಂತ ಕೇಳಿದಾಗ ಪಾಪ ಅವರು ಹೇಗೆ ರಿಯಾಕ್ಟ್ ಮಾಡಬಹುದಿತ್ತು? ಸಿದ್ದರಾಮಯ್ಯನವರ ಜೊತೆ ವೇದಿಕೆ ಮೇಲಿದ್ದ ಜನರೆಲ್ಲ ಜೋರಾಗಿ ನಗುವುದನ್ನು ನೀವು ವಿಡಿಯೋನಲ್ಲಿ ನೋಡಬಹುದು.

ಈಶ್ವರಪ್ಪ ಅವರು ಬಿಲ್ ಗಳನ್ನು ಕ್ಲೀಯರ್ ಮಾಡಿಸಲು ಶೇ. 40 ಕಮೀಷನ್ ಕೇಳಿದರೆಂದು ಮೃತ ಸಂತೋಷ್ ಕೆ ಪಾಟೀಲ ಮತ್ತು ಅವರ ಸಹೋದರ ಹೇಳಿದ್ದಾರೆ. ಹಾಗಾಗಿ ಅವರ ವಿರುದ್ಧ ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ (Prevention of Corruption Act) ಸೆಕ್ಷನ್ 7ಎ ಮತ್ತು ಹಾಗೂ ಮತ್ತೊಂದು ಸೆಕ್ಷನ್ ಕೇಸು ದಾಖಲಿಸಬೇಕು ಎಂದು ಹೇಳಿದ ಸಿದ್ದರಾಮಯ್ಯ ಇನ್ನೊಮ್ಮೆ ಪೊಲೀಸರ ಕಡೆ ತಿರುಗಿ ಅಲ್ವೇನ್ರೀ ಅಂತ ಕೇಳಿದರು!

ಆದರೆ ಅವರ ವಿರುದ್ಧ ಕೇಸು ದಾಖಲಾಗಲಿಲ್ಲ, ಯಾಕೆಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಶ್ವರಪ್ಪನ ರಕ್ಷಣೆಗೆ ನಿಂತುಬಿಟ್ಟಿದ್ದಾರೆ, ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:   ಹಾವಿನಂತೆ ನಾಲಿಗೆ ಹೊರಹಾಕಿ ಕಚ್ಚಾ ಬಾದಾಮ್ ಹಾಡಿಗೆ ನಾಗಿಣಿ ಡ್ಯಾನ್ಸ್ ಮಾಡಿದ ಮಹಿಳೆ; ವಿಡಿಯೋ ವೈರಲ್  

Follow us on