ಹಾವಿನಂತೆ ನಾಲಿಗೆ ಹೊರಹಾಕಿ ಕಚ್ಚಾ ಬಾದಾಮ್ ಹಾಡಿಗೆ ನಾಗಿಣಿ ಡ್ಯಾನ್ಸ್ ಮಾಡಿದ ಮಹಿಳೆ; ವಿಡಿಯೋ ವೈರಲ್

ಹಾವಿನಂತೆ ನಾಲಿಗೆ ಹೊರಹಾಕಿ ಕಚ್ಚಾ ಬಾದಾಮ್ ಹಾಡಿಗೆ ನಾಗಿಣಿ ಡ್ಯಾನ್ಸ್ ಮಾಡಿದ ಮಹಿಳೆ; ವಿಡಿಯೋ ವೈರಲ್
ಕಚ್ಚಾ ಬಾದಾಮ್ ಹಾಡಿಗೆ ಡ್ಯಾನ್ಸ್ ಮಾಡಿರುವ ಮಹಿಳೆ

ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿರುವ ಮಹಿಳೆ ತನ್ನ ನಾಲಿಗೆಯನ್ನು ಹಾವಿನಂತೆ ಹೊರಹಾಕಿದ್ದಾರೆ. ಜೊತೆಗೆ ಹಾವಿನಂತೆ ಕೈಗಳನ್ನು ಚಲಿಸುವ ಮೂಲಕ ನಾಗಿಣಿ ಡ್ಯಾನ್ಸ್ ಮಾಡಿದ್ದಾರೆ. ಮಹಿಳೆಯ ಸ್ಟೆಪ್ಸ್​ಗೆ ಸುತ್ತಮುತ್ತಲಿನ ಜನರು ನಗೆ ಬೀರಿದ್ದಾರೆ.

TV9kannada Web Team

| Edited By: sandhya thejappa

Apr 18, 2022 | 11:19 AM

ಕಡಲೆಕಾಯಿ ಮಾರುವ ವ್ಯಕ್ತಿ ಹಾಡಿದ ಹಾಡು ಸದ್ಯ ಸಾಮಾಜಿಕ ಜಾಲಾತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಜೊತೆಗೆ ಇದರ ಕ್ರೇಜ್ ಕೂಡಾ ಮುಂದುವರೆದಿದೆ. ಆ ಹಾಡು ಬೇರೆ ಯಾವುದು ಅಲ್ಲ, ಕಚ್ಚಾ ಬಾದಾಮ್ ಸಾಂಗ್ (Kaccha Badam Song). ಪುಟ್ಟ ಮಕ್ಕಳಿಂದ ಹಿಡಿದು ಸಿನಿಮಾ ಸೆಲೆಬ್ರಿಟಿಗಳ ವರೆಗೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬುಬನ್ ಬಡ್ಯಾಕರ್ ಎಂಬ ಸಾಮಾನ್ಯ ಕಡಲೆಕಾಯಿ ವ್ಯಾಪಾರಿ, ತಾನು ವ್ಯಾಪಾರ ಮಾಡುವಾಗ ಬಾದಾಮ್.. ಬಾದಾಮ್.. ಕಚ್ಚಾ ಬಾದಾಮ್ ಎಂದು ಹಾಡಿದ್ದರು. ಸದ್ಯ ಈ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡಿದ್ದು, ಡ್ಯಾನ್ಸ್ ವಿಡಿಯೋ ತಮಾಷೆಯಿಂದ ಕೂಡಿದೆ.

ಬುಬನ್ ಬಡ್ಯಾಕರ್ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ. ಇವರ ಹಾಡಿಗೆ ಸೆಲೆಬ್ರಿಟಿಗಳು ರೀಲ್ಸ್ಗಳನ್ನ ಮಾಡಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಇದೇ ರೀತಿ ಮಹಿಳೆಯೊಬ್ಬರು ಕಚ್ಚಾ ಬಾದಾಮ್ ಹಾಡಿಗೆ ನಾಗಿಣಿ ಸ್ಟೆಪ್ಸ್ ಹಾಕಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ‘ಬಟರ್​ಫ್ಲೈ ಮಹೀ’ ಎಂಬ ಪುಟದಿಂದ ಅಪ್​ಲೋಡ್​ ಮಾಡಲಾಗಿದೆ. ಸುಮಾರು 16 ಸಾವಿರ ಲೈಕ್ಸ್ ಪಡೆದುಕೊಂಡಿದೆ.

ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿರುವ ಮಹಿಳೆ ತನ್ನ ನಾಲಿಗೆಯನ್ನು ಹಾವಿನಂತೆ ಹೊರಹಾಕಿದ್ದಾರೆ. ಜೊತೆಗೆ ಹಾವಿನಂತೆ ಕೈಗಳನ್ನು ಚಲಿಸುವ ಮೂಲಕ ನಾಗಿಣಿ ಡ್ಯಾನ್ಸ್ ಮಾಡಿದ್ದಾರೆ. ಮಹಿಳೆಯ ಸ್ಟೆಪ್ಸ್​ಗೆ ಸುತ್ತಮುತ್ತಲಿನ ಜನರು ನಗೆ ಬೀರಿದ್ದಾರೆ. ಈ ಡ್ಯಾನ್ಸ್ ವೀಕ್ಷಿಸಿರುವ ನೆಟ್ಟಿಗರು ನಗುವ ಎಮೋಜಿಗಳನ್ನ ಕಾಮೆಂಟ್ ಮಾಡಿದ್ದಾರೆ.

ಇನ್ನು ಇದೇ ಹಾಡಿಗೆ ಭಾರತಿ ಹೆಗಡೆ ಎಂಬ ಮಹಿಳೆ ರಸ್ತೆ ಬದಿ ನಿಂತು​ ಸ್ಟೆಪ್​ ಹಾಕಿದ್ದರು. ಈ ವಿಡಿಯೋ ಬರೋಬ್ಬರಿ 8 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿದೆ. ಭಾರತಿ ಹೆಗಡೆ ಯೋಗ ಶಿಕ್ಷಕಿ ಎಂದು ಹೇಳಲಾಗುತ್ತದೆ. ವಿಡಿಯೋದಲ್ಲಿ ಕಾರನ್ನು ತಮ್ಮ ಹಿಂದೆ ನಿಲ್ಲಿಸಿ ರಸ್ತೆಯ ಬದಿಯಲ್ಲಿ ನೃತ್ಯ ಮಾಡುವುದನ್ನು ಕಾಣಬಹುದು.

ಇದನ್ನೂ ಓದಿ

ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ, ಆದರೆ ಮುಗ್ಧರಿಗೆ ತೊಂದರೆ ಕೊಡುವುದು ಬೇಡ; ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್

545 ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ; ಬಿಜೆಪಿಯ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ ಬಂಧನ

Follow us on

Related Stories

Most Read Stories

Click on your DTH Provider to Add TV9 Kannada