ಈಶ್ವರಪ್ಪ ನಮ್ಮನ್ನು ಪದೇಪದೆ ಗೂಂಡಾಗಳೆಂದು ಕರೆಯುವುದು ಯಾಕೆ?: ಶಬನಮ್, ಜಬೀವುಲ್ಲಾ ಪತ್ನಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 18, 2022 | 4:16 PM

ಸ್ಥಳೀಯ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು, ಪದೇಪದೆ ಮುಸಲ್ಮಾನರನ್ನು ಗೂಂಡಾಗಳೆಂದು ಉಲ್ಲೇಖಿಸುತ್ತಿದ್ದಾರೆ, ಅವರು ಈ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕು ಅಂತ ಶಬನಮ್ ಆಗ್ರಹಿಸಿದರು.

ಶಿವಮೊಗ್ಗದ ಪ್ರೇಮ್ ಸಿಂಗ್ (Prem Singh) ಇರಿತ ಪ್ರಕರಣದಲ್ಲಿ ಆರೋಪಿ ನಂಬರ್ ವನ್ ಆಗಿರುವ ಜಬೀವುಲ್ಲಾ ಪತ್ನಿ ಶಬನಮ್ (Shabnam) ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿ ತನ್ನ ಪತಿಯ ವಿರುದ್ಧ ಸುಳ್ಳು ಆರೋಪಗಳನ್ನು ಹೇರಿ ಜೈಲಿಗೆ ಕಳಿಸಲಾಗಿದೆ ತಮಗೆ ನ್ಯಾಯ ಬೇಕಾಗಿದೆ ಎಂದು ಹೇಳಿದರು. ಸ್ಥಳೀಯ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು, ಪದೇಪದೆ ಮುಸಲ್ಮಾನರನ್ನು ಗೂಂಡಾಗಳೆಂದು ಉಲ್ಲೇಖಿಸುತ್ತಿದ್ದಾರೆ, ಅವರು ಈ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕು ಅಂತ ಶಬನಮ್ ಆಗ್ರಹಿಸಿದರು.