ನನ್ನ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆದಿದ್ದು ಆರೆಸ್ಸೆಸ್ ಗೂಂಡಾಗಳು: ಸಿದ್ದರಾಮಯ್ಯ
ಆಗಸ್ಟ್ 26ರಂದು ತಾವು ಪುನಃ ಕೊಡಗಿಗೆ ಬಂದು ಎಸ್ ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಮಡಿಕೇರಿ: ಗುರುವಾರದಂದು ಕೊಡಗು (Kodagu) ಜಿಲ್ಲೆಯಲ್ಲಿ ತಮ್ಮ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆದವರು ಆರೆಸ್ಸೆಸ್ ಗೂಂಡಾಗಳೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಬೆಂಕಿಯುಗುಳಿದ್ದಾರೆ. ಘಟನೆಯ ನಂತರ ಚಿಕ್ಕಮಗಳೂರಿಗೆ ತೆರಳುವ ಮೊದಲು ಕೊಡ್ಲಿಪೇಟೆಯಲ್ಲಿ (Kodlipet) ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಸಿದ್ದರಾಮಯ್ಯ ಕೊಡಗು ಜಿಲ್ಲೆಯ ಪೊಲೀಸರನ್ನು ಸಹ ತರಾಟೆಗೆ ತೆಗೆದುಕೊಂಡರು. ಆಗಸ್ಟ್ 26ರಂದು ತಾವು ಪುನಃ ಕೊಡಗಿಗೆ ಬಂದು ಎಸ್ ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಮಾಜಿ ಮುಖ್ಯಮಂತ್ರಿಗಳು ಹೇಳಿದರು.
Latest Videos