ಯಡಿಯೂರಪ್ಪ ಮೊದಲು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಉಳಿಸಿಕೊಳ್ಳಲಿ: ಹೆಚ್ ಡಿ ಕುಮಾರ ಸ್ವಾಮಿ

ಯಡಿಯೂರಪ್ಪ ಮೊದಲು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಉಳಿಸಿಕೊಳ್ಳಲಿ: ಹೆಚ್ ಡಿ ಕುಮಾರ ಸ್ವಾಮಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 19, 2022 | 3:14 PM

ಯಡಿಯೂರಪ್ಪನವರು ದಕ್ಷಿಣ ಭಾರತದಲ್ಲೆಲ್ಲ ಬಿಜೆಪಿಯನ್ನು ಅಧಿಕಾರಕ್ಕೆ ತರ್ತೀವಿ ಅನ್ನುತ್ತಾರೆ, ಮೊದಲು ಅದನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ ಎಂದು ಕುಮಾರಸ್ವಾಮಿ ಹೇಳಿದರು.

ರಾಯಚೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಭಾರತೀಯ ಜನತಾ ಪಕ್ಷ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ (BS Yediyurappa) ಕೇಂದ್ರ ಸಂಸದೀಯ ಮಂಡಳಿಯಲ್ಲಿ (Parliamentary Committee) ಸ್ಥಾನ ನೀಡಿರುವುದನ್ನು ಗೇಲಿ ಮಾಡಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರೊಂದಿಗೆ ಮಾತಾಡಿದ ಅವರು ಅದ್ಯಾವ ಉನ್ನತ ಹುದ್ದೆ ಅಂತ ಇವರೆಲ್ಲ ಸಂಭ್ರಮಿಸುತ್ತಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ. ಯಡಿಯೂರಪ್ಪನವರು ದಕ್ಷಿಣ ಭಾರತದಲ್ಲೆಲ್ಲ ಬಿಜೆಪಿಯನ್ನು ಅಧಿಕಾರಕ್ಕೆ ತರ್ತೀವಿ ಅನ್ನುತ್ತಾರೆ, ಮೊದಲು ಅದನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ ಎಂದರು.