ನಾನು ಸಾವರ್ಕರ್ ಅವರನ್ನು ಒಬ್ಬ ಮಾನವನಾಗಿ ಗೌರವಿಸುತ್ತೇನೆ: ಸಿದ್ದರಾಮಯ್ಯ

ನಾನು ಸಾವರ್ಕರ್ ಅವರನ್ನು ಒಬ್ಬ ಮಾನವನಾಗಿ ಗೌರವಿಸುತ್ತೇನೆ: ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 19, 2022 | 4:10 PM

ನಾವು ಯಾರನ್ನೂ ಜಾತಿ ಮತ ಕೇಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ, ನಮ್ಮಲ್ಲಿ ಎಲ್ಲರೂ ಸಮಾನರು, ನನಗೆ ರೋಗ ಬಂದಾಗ ಕುರುಬ ಸಮದಾಯದ ವೈದ್ಯರನ್ನೇ ಅರಸಿಕೊಂಡು ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಚಿಕ್ಕಮಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತಾಡಿದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತನಗೆ ವೀರ್ ಸಾವರ್ಕರ್ (Veer Savarkar) ಅವರ ಬಗ್ಗೆ ಗೌರವವಿದೆ, ಅವರೂ ನಮ್ಮಂತೆ ನರಮಾನವರಾಗಿದ್ದರು, ನಾವು ಯಾರನ್ನೂ ದ್ವೇಷಿಸುವುದಿಲ್ಲ ಎಂದು ಹೇಳಿದರು. ನಾವು ಪ್ರತಿಪಾದಿಸೋದೇ ಅದು, ಮಾನವರಾಗಿ ಹುಟ್ಟಿದ್ದೀರಿ, ಮಾನವರನ್ನು ಪ್ರೀತಿಸಿರಿ ಅನ್ನೋದು. ನಾವು ಯಾರನ್ನೂ ಜಾತಿ ಮತ ಕೇಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ, ನಮ್ಮಲ್ಲಿ ಎಲ್ಲರೂ ಸಮಾನರು, ನನಗೆ ರೋಗ ಬಂದಾಗ ಕುರುಬ ಸಮದಾಯದ ವೈದ್ಯರನ್ನೇ ಅರಸಿಕೊಂಡು ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.