ಕೆ ಎಸ್ ಈಶ್ವರಪ್ಪ ಇನ್ನೂ ಹತ್ತು ಬಾರಿ ಹುಟ್ಟಿಬಂದರೂ ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡಲಾಗದು: ಬಿಕೆ ಹರಿಪ್ರಸಾದ್

ಕೆ ಎಸ್ ಈಶ್ವರಪ್ಪ ಇನ್ನೂ ಹತ್ತು ಬಾರಿ ಹುಟ್ಟಿಬಂದರೂ ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡಲಾಗದು: ಬಿಕೆ ಹರಿಪ್ರಸಾದ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 17, 2022 | 6:46 PM

ಸುಳ್ಳುಗಳನ್ನು ಪದೇಪದೆ ಹೇಳಿ ಸುಳ್ಳನ್ನು ಸತ್ಯವಾಗಿಸುವ ಪ್ರಯತ್ನ ಬಿಜೆಪಿ ನಾಯಕರು ಮಾಡುತ್ತಾರೆ, ಮಾತಾಡಲು ಏನೂ ಸಿಗದಿದ್ದರೆ ಸುಳ್ಳು ಹೇಳಬೇಕೆನ್ನುವುದು ಈಶ್ವರಪ್ಪನವರದ್ದೇ ಸ್ಲೋಗನ್ ಎಂದು ಪ್ರಸಾದ್ ಕುಹುಕವಾಡಿದರು.

ಕಾರವಾರ:  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮತ್ತು ಮೊಹಮ್ಮದ್ ನಲಪಾಡ್ ನಂಥ ನಾಯಕರು ಕಾಂಗ್ರೆಸ್ ನಲ್ಲಿ ಮುಂದುವರಿದರೆ ಪಿಎಫ್ ಐ (PFI) ಸಂಘಟನೆಯನ್ನು ಬ್ಯಾನ್ ಮಾಡಿದ ಹಾಗೆ ಅ ಪಕ್ಷವನ್ನೂ ಬ್ಯಾನ್ ಮಾಡಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ಕೆ ಎಸ್ ಈಶ್ವರಪ್ಪ (KS Eshwarappa) ಹೇಳಿದ್ದಕ್ಕೆ ಕಾಂಗ್ರೆಸ್ ಧುರೀಣ ಬಿಕೆ ಹರಿಪ್ರಸಾದ್ (BK Hari Prasad) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕಾರವಾರದ ಶಿರಸಿಯಲ್ಲಿ ಮಾತಾಡಿದ ಅವರು, ಈಶ್ವರಪ್ಪ ಇನ್ನೂ ಹತ್ತು ಜನ್ಮ ತಳೆದರೂ ಕಾಂಗ್ರೆಸ್ ಪಕ್ಷ ಬ್ಯಾನ್ ಮಾಡಲುಅ ಸಾಧ್ಯವಾಗದು. ಸುಳ್ಳುಗಳನ್ನು ಪದೇಪದೆ ಹೇಳಿ ಸುಳ್ಳನ್ನು ಸತ್ಯವಾಗಿಸುವ ಪ್ರಯತ್ನ ಬಿಜೆಪಿ ನಾಯಕರು ಮಾಡುತ್ತಾರೆ, ಮಾತಾಡಲು ಏನೂ ಸಿಗದಿದ್ದರೆ ಸುಳ್ಳು ಹೇಳಬೇಕೆನ್ನುವುದು ಈಶ್ವರಪ್ಪನವರದ್ದೇ ಸ್ಲೋಗನ್ ಎಂದು ಪ್ರಸಾದ್ ಕುಹುಕವಾಡಿದರು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ