ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ; ಸಿಕ್ಕಿತು ದೊಡ್ಡ ಸೂಚನೆ
Ramya Divya Spandana: ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿ ಅಂದರ್ ಆಗಿದ್ದಾರೆ. ಹೆಬ್ಬಾಳ ಫ್ಲೈಓವರ್ ಉದ್ಘಾಟನೆ ವೇಳೆ ಅವರು ಮಾತನಾಡಿದರು. ಆಗ ಅವರು ಒಂದು ದೊಡ್ಡ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಲ್ಲಿ ಅವರು ಎಲ್ಲರ ವಿರುದ್ಧವೂ ಕ್ರಮವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ನಟಿ ರಮ್ಯಾ ಅವರು ಇತ್ತೀಚೆಗೆ ಕಮಿಷನರ್ ಕಚೇರಿಗೆ ತೆರಳಿ ತಮಗೆ ಅಶ್ಲೀಲ ಸಂದೇಶ ನೀಡಿದವರ ಹೆಸರು ನೀಡಿದ್ದರು. ಈ ಪೈಕಿ ಕೆಲವೇ ಕೆಲವು ಮಂದಿ ಮಾತ್ರ ಬಂಧನಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಮಾತನಾಡಿದ ರಮ್ಯಾ, ಎಲ್ಲರೂ ಅರೆಸ್ಟ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದರಿಂದ ಉಳಿದ ತಪ್ಪಿಸ್ಥರಿಗೆ ಭಯ ಶುರುವಾಗಿದೆ. ತಾವು ಬಚಾವ್ ಎಂದು ಯಾರೂ ಅಂದುಕೊಳ್ಳುವಂತಿಲ್ಲ ಎಂದು ರಮ್ಯಾ ಸೂಕ್ಷ್ಮವಾಗಿ ಹೇಳಿದ್ದಾರೆ. ಅವರಿಗೆ ಈ ಮೊದಲಿಗಿಂತ ಕಡಿಮೆ ಅಶ್ಲೀಲ ಸಂದೇಶ ಬರುತ್ತಿದೆಯಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

