‘ಜೈಲಲ್ಲಿ ದರ್ಶನ್ ನನ್ನ ತಬ್ಬಿಕೊಂಡರು’; ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆದ ಮಾಜಿ ಖೈದಿಯ ಮಾತು

| Updated By: ರಾಜೇಶ್ ದುಗ್ಗುಮನೆ

Updated on: Jul 25, 2024 | 8:26 AM

ಹೊರಗಡೆ ಇದ್ದಾಗ ನಟ ದರ್ಶನ್​ ಅವರು ಐಷಾರಾಮಿ ಜೀವನ ನಡೆಸುತ್ತಿದ್ದರು. ಆದರೆ ಜೈಲಿನಲ್ಲಿ ಅವರ ಪರಿಸ್ಥಿತಿ ಕಷ್ಟವಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದಲ್ಲಿ ದಿನ ಕಳೆಯುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಖೈದಿ ಒಬ್ಬರು ದರ್ಶನ್​ನ ಭೇಟಿ ಮಾಡಿದ ಬಗ್ಗೆ ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ತುರುವನೂರು ಸಿದ್ಧಾರೂಢ ಅವರು ಜೈಲುವಾಸ ಅನುಭವಿಸಿದ್ದಾರೆ. ಸನ್ನಡತೆ ಆಧಾರದಲ್ಲಿ ಜೈಲಿಂದ ಅವರು ರಿಲೀಸ್ ಆಗಿದ್ದಾರೆ. ಅವರು ದರ್ಶನ್ ಅಭಿಮಾನಿ. ವಿಶೇಷ ಎಂದರೆ ಜೈಲಲ್ಲಿ ದರ್ಶನ್ ಅವರನ್ನು ಭೇಟಿ ಮಾಡಲು ತುರುವನೂರು ಸಿದ್ಧಾರೂಢ ಅವರಿಗೆ ಅವಕಾಶ ಸಿಕ್ಕಿತ್ತು. ಅವರು ದರ್ಶನ್​ನ ಭೇಟಿ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ‘ನಾನು ಜೈಲು ಅಧಿಕಾರಿಗಳ ಬಳಿ ದರ್ಶನ್ ಭೇಟಿಗೆ ಅವಕಾಶ ನೀಡುವಂತೆ ಕೋರಿದೆ. ನನಗೆ ಅವರು ಅವಕಾಶ ಮಾಡಿಕೊಟ್ಟರು. ನಾನು ಅಭಿಮಾನಿ ಎಂದಾಗ ದರ್ಶನ್​ಗೆ ಖುಷಿ ಆಯಿತು. ದರ್ಶನ್ ಶೇಕ್ ಹ್ಯಾಂಡ್ ಮಾಡಿದರು. ನನ್ನನ್ನು ತಬ್ಬಿಕೊಂಡರು. ಅವರಿಗೆ ಧ್ಯಾನ ಹೇಳಿಕೊಟ್ಟೆ’ ಎಂದಿದ್ದಾರೆ ತುರುವನೂರು ಸಿದ್ಧಾರೂಢ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.