ಹೃದಯದಿಂದ ಇನ್ನೂ ತರುಣರಾಗಿರುವವರಿಗೆ ಹೇಳಿ ಮಾಡಿಸಿದಂತಿದೆಯಂತೆ ಹುಂಡೈ ಐ20 ಎನ್ ಲೈನ್ ಕಾರು!
ಹುಂಡೈ ಐ 20 ಎನ್ ಲೈನ್ ಹೊರಗಿನಿಂದ ಸ್ಪೋರ್ಟಿ ಸ್ಟೈಲಿಂಗ್ ಅಂಶವನ್ನು ಹೊಂದಿದೆ. ಮುಂಭಾಗದ ಬಂಪರ್ ಅನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದೆ.
ಹುಂಡೈ ಕಂಪನಿಯು ಇತ್ತೀಚಿಗೆ ಐ20 ಎನ್ ಲೈನ್ ಕಾರನ್ನು ಭಾರತದಲ್ಲಿ ಲಾಂಚ್ ಮಾಡಿದ್ದ ಅದರ ಎಕ್ಸ್ ಶೋರೂಮ್ ಬೆಲೆ ರೂ. 9.84 ಲಕ್ಷಗಳಾಗಿದೆ. ಇದೇ ಕಾರಿನ ಟಾಪ್ ಲೈನ್ ಮಾಡೆಲ್ ಬೆಲೆ 11.75 ಲಕ್ಷಗಳವರೆಗೆ ಇದೆ. ಕಾರು ಪರಿಣಿತರು ಹೇಳುವ ಪ್ರಕಾರ, ಯುವ ತಲೆಮಾರಿಗೆ ಅಥವಾ ತಮ್ಮ ಹೃದಯವನ್ನು ಇನ್ನೂ ತರುಣಾವಸ್ಥೆಯಲ್ಲಿ ಇಟ್ಟುಕೊಂಡಿರುವವರಿಗೆ ಈ ಕಾರು ಅತ್ಯಂತ ಐಡಿಯಲ್ ಆಗಿದೆ. ಹುಂಡೈ ಐ20 ಎನ್ ಲೈನ್ ಮಾದರಿಯ ಇನ್ನೂ ಹಲವಾರು ಬಗೆಯ ಕಾರುಗಳನ್ನು ಲಾಂಚ್ ಮಾಡಲಿದ್ದು ಅವುಗಳ ಪೈಕಿ ಇದು ಮೊದಲನೆಯದಾಗಿದೆ. ಎನ್ ಲೈನ್ ಮಾದರಿ ಕಾರು ಕಾಸ್ಮೆಟಿಕ್ ಅಪ್‌ಡೇಟ್ ಮತ್ತು ಕೆಲವು ಸಣ್ಣ ಟ್ಯೂನಿಂಗ್ ಬದಲಾವಣೆಗಳನ್ನು ಹೊಂದಿದ್ದು ಹೆಚ್ಚು ಅನಂದದಾಯಕ ಡ್ರೈವಿಂಗ್ ಅನುಭವವನ್ನು ನೀಡುತ್ತದೆ.
ಹುಂಡೈ ಐ 20 ಎನ್ ಲೈನ್ ಹೊರಗಿನಿಂದ ಸ್ಪೋರ್ಟಿ ಸ್ಟೈಲಿಂಗ್ ಅಂಶವನ್ನು ಹೊಂದಿದೆ. ಮುಂಭಾಗದ ಬಂಪರ್ ಅನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದೆ. ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಚೆಕರ್ಡ್ ಫ್ಲ್ಯಾಗ್‌ನಿಂದ ಇದು ಸ್ಫೂರ್ತಿ ಪಡೆದಿದೆ ಅಂತ ಹೇಳಲಾಗುತ್ತಿದ್ದು ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಎಲ್‌ಇಡಿ ಪ್ರೊಜೆಕ್ಟರ್ ಹೆಡ್ ಲೈಟ್ ಯೂನಿಟ್‌ಗಳಿಂದ ಆವೃತವಾಗಿದೆ. ಈ ಕಾರಿನ ಸುತ್ತಲೂ ಎನ್ ಲೈನ್ ಬ್ಯಾಡ್ಜಿಂಗ್ ಇದೆ. ಕಾರಿನ ಮುಂಭಾಗದ ಫ್ರಂಟ್ ಕಿಡ್ ಪ್ಲೇಟ್ ಮೇಲೆ ಕೆಂಪು ಹೈಲೈಟ್ ನೋಡಿದಾಕ್ಷಣ ಇದು ಎನ್ ಲೈನ್ ಮಾಡೆಲ್ ಎಂದು ಗುರುತಿಸಬಹುದು.
ಹುಂಡೈ ಐ20 ಎನ್ ಲೈನ್ 16 ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳಲ್ಲಿ ಸವಾರಿ ಮಾಡುತ್ತದೆ ಮತ್ತು ಬ್ರೇಕ್ ಕ್ಯಾಲಿಪರ್‌ಗಳನ್ನು ಕೆಂಪು ಬಣ್ಣದಲ್ಲಿ ಮಾಡಲಾಗಿದೆ. ಚಕ್ರಗಳು ಸಹ ಎನ್ ಲಾಂಛನವನ್ನು ಒಳಗೊಂಡಿರುತ್ತವೆ ಮತ್ತು ಎಲ್ಲಾ ನಾಲ್ಕು ಚಕ್ರಗಳು ವಾಹನ ಕೂಡಲೇ ನಿಲ್ಲುವಂತಾಗಲು ಡಿಸ್ಕ್ ಬ್ರೇಕ್‌ಗಳನ್ನು ಹೊಂದಿವೆ.
ಐ 20 ಎನ್ ಲೈನ್ 1.0-ಲೀಟರ್ ಟರ್ಬೊ ಜಿಡಿಐ ಮೋಟಾರ್ ಅನ್ನು ಐ 20 ನಿಂದ ಎರವಲಾಗಿ ಪಡೆದಿದೆ ಎಂದು ಹೇಳಲಾಗಿದ್ದು, 120 ಪಿಎಸ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಒದಗಿಸುತ್ತದೆ. ಈ ಕಾರು ಏಳು-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಮತ್ತು ಆರು-ಸ್ಪೀಡ್ ಐಎಂಟಿ ಯುನಿಟ್ಗಳೊಂದಿಗೆ ಬರುತ್ತದೆ.
ಇದನ್ನೂ ಓದಿ: Viral Video: ಮದುವೆ ದಿನದಂದೇ ಮೊಬೈಲ್ನಲ್ಲಿ ಗೇಮ್ ಆಡುತ್ತಾ ಕುಳಿತ ವಧು ವರರು; ವಿಡಿಯೋ ವೈರಲ್