Madikeri; ಐದು ಕೆಜಿ ಅಕ್ಕಿ ಪ್ರಧಾನಿ ನರೇಂದ್ರ ಮೋದಿ ನೀಡುತ್ತಿರುವುದನ್ನು ಒಪ್ಪಿಕೊಂಡ ಸಿದ್ದರಾಮಯ್ಯರಿಗೆ ಧನ್ಯವಾದ: ಪ್ರತಾಪ ಸಿಂಹ

|

Updated on: Jun 29, 2023 | 2:25 PM

ಸಿದ್ದರಾಮಯ್ಯ ತಾವು ನೀಡಿದ ಗ್ಯಾರಂಟಿಗೆ ಅನುಗುಣವಾಗಿ 10 ಕೆಜಿ ಅಕ್ಕಿ ಬದಲು ಕೆಜಿಗೆ ರೂ. 34 ರಂತೆ ರೂ. 340 ಅನ್ನು ಕಾರ್ಡುದಾರರ ಬ್ಯಾಂಕ್ ಖಾತೆಗಳಿಗೆ ಹಾಕಲಿ ಎಂದರು.

ಮಡಿಕೇರಿ: ಅನ್ನಭಾಗ್ಯ ಯೋಜನೆಯಡಿ (Anna Bhagya scheme) ಅಕ್ಕಿ ಬದಲು ಹಣ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸಂಸದ ಪ್ರತಾಪ್ ಸಿಂಹ (Pratap Simha) ಪ್ರಶ್ನಿಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿಂಹ, ಮುಖ್ಯಮಂತ್ರಿಗಳ್ಯಾಕೆ 5 ಕೆಜಿ ಅಕ್ಕಿ ಅಂತ ಮಾತಾಡುತ್ತಿದ್ದಾರೆ, ಇನ್ನಾದರೂ ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಲಿ ಎಂದು ಟೀಕಿಸಿದರು. ಚುನಾವಣಾ ಪ್ರಚಾರದಲ್ಲಿ ಅವರು 10 ಕೆಜಿ ಅಕ್ಕಿ ಅಂತ ಕೈ ಮಾಡಿ ತೋರಿಸುತ್ತಿದ್ದರು, ಈಗ್ಯಾಕೆ 5 ಕೆಜಿ ಅಂತಿದ್ದಾರೆ? ಅಂತ ಸಂಸದ ಪ್ರಶ್ನಿಸಿದರು. 5 ಕೆಜಿ ಅಕ್ಕಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರ ನೀಡುತ್ತಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಂಗೀಕರಿಸಿರುವುದಕ್ಕೆ ಧನ್ಯವಾದ ಹೇಳುತ್ತೇನೆ ಎಂದ ಸಂಸದ, ಅದರೆ ಅವರು ತಾವು ನೀಡಿದ ಗ್ಯಾರಂಟಿಗೆ ಅನುಗುಣವಾಗಿ 10 ಕೆಜಿ ಅಕ್ಕಿ ಬದಲು ಕೆಜಿಗೆ ರೂ. 34 ರಂತೆ ರೂ. 340 ಅನ್ನು ಕಾರ್ಡುದಾರರ ಬ್ಯಾಂಕ್ ಖಾತೆಗಳಿಗೆ ಹಾಕಲಿ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on