ಉತ್ತಮ ಬ್ಯಾಟರ್ ಆಗಿದ್ದ ದಿವ್ಯಾ ಕುಮಾರ್ನನ್ನು ಕ್ರಿಕೆಟ್ ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ: ಸಂಬಂಧಿಕರು
ರವಿಕುಮಾರ್ ಮತ್ತು ಬೇರೆ ಒಂದಷ್ಟು ಜನ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರಂತೆ. ದಿವ್ಯಾ ಕುಮಾರ್ ಬಿದ್ದ ರೀತಿ ನೋಡಿದರೆ ತಲೆಗೆ ಪೆಟ್ಟಾಗುವ ಸಾಧ್ಯತೆಯೇ ಇಲ್ಲವೆಂದು ರವಿ ಹೇಳುತ್ತಾರೆ. ಪಂದ್ಯ ಮುಗಿದ ಬಳಿಕ 7-8 ಜನ ಸೇರಿ ಪಾರ್ಟಿ ಮಾಡಿದ್ದರಂತೆ. ಎರಡು ಮಕ್ಕಳ ತಂದೆಯಾಗಿದ್ದ ದಿವ್ಯಾ ಕುಮಾರ್ ಉತ್ತಮ ಕ್ರಿಕೆಟ್ ಆಟಗಾರನಾಗಿದ್ದರಿಂದ ಬೇರೆ ಬೇರೆ ಊರಿನ ತಂಡಗಳು ಅವರನ್ನು ತಮ್ಮ ಪರವಾಗಿ ಆಡಲು ಕರೆದೊಯ್ಯುತ್ತಿದ್ದವಂತೆ.
ಮೈಸೂರು, 15 ಮಾರ್ಚ್: ಕಳೆದ ತಿಂಗಳು 24 ರಂದು ನಡೆದ ರಸ್ತೆ ಅಪಘಾತವೊಂದರಲ್ಲಿ ತೀವ್ರವಾಗಿ ತಲೆಗೆ ಪೆಟ್ಟು ಮಾಡಿಕೊಂಡು ಕೋಮಾಗೆ ಜಾರಿ ನಿನ್ನೆ ಕೊನೆಯುಸಿರೆಳೆದ ಹೆಚ್ ಡಿ ಕೋಡೆ ತಾಲ್ಲೂಕಿನ ವಡ್ಡರಗುಡಿ ಗ್ರಾಮದ ದಿವ್ಯಾ ಕುಮಾರ್ (Divya Kumar) ಸಾವಿನ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಮಾಧ್ಯಮಗಳೊಂದಿಗೆ ಮಾತಾಡಿರುವ ರವಿಕುಮಾರ್ ಎನ್ನುವವರು, ಕ್ರಿಕೆಟ್ ವೈಷಮ್ಯದಿಂದ ಕುಮಾರ್ ಕೊಲೆ ಮಾಡಿ ಅಪಘಾತದಂತೆ ಬಿಂಬಿಸುವ ಕೆಲಸ ನಡೆದಿದೆ ಎನ್ನುತ್ತಾರೆ. ಬೀಚನಹಳ್ಳಿಯಲ್ಲಿ ನಡೆದ ಕ್ರಿಕೆಟ್ ಟೂರ್ನಿಯೊಂದರಲ್ಲಿ ಕುಮಾರ್, ನೇರಳೆ ಪ್ರೀಮಿಯರ್ ಲೀಗ್ ಟೀಮಿನ ವಿರುದ್ಧ ಕೊನೆಯ 4 ಎಸೆತಗಳಲ್ಲಿ ಗೆಲ್ಲಲು 20 ರನ್ ಬೇಕಿದ್ದಾಗ ಮೂರು ಸಿಕ್ಸ್ ಮತ್ತು ಒಂದು 2ರನ್ ಹೊಡೆತ ಬಾರಿಸಿ ತನ್ನ ತಂಡವನ್ನು ಗೆಲ್ಲಿಸಿದ್ದರಂತೆ. ಅದೇ ಕೋಪಕ್ಕೆ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ರವಿಕುಮಾರ್ ಹೇಳುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕತ್ತು ಸೀಳಿ ಸ್ನೇಹಿತನನ್ನೇ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ