Prajadhvani Yatre: ಕಲಬುರಗಿಯ ಸೇಡಂನಲ್ಲಿ ಸೆಲ್ಫೀಗಳಿಗಾಗಿ ಸಿದ್ದರಾಮಯ್ಯನವರನ್ನು ಮುತ್ತಿಗೆ ಹಾಕಿದ ಅಭಿಮಾನಿಗಳು
ಸಿದ್ದರಾಮಯ್ಯನವರೊಂದಿಗೆ ಡಾ ಶರಣಪ್ರಕಾಶ್ ಪಾಟೀಲ್, ಜಮೀರ್ ಅಹ್ಮದ್, ಈಶ್ವರ್ ಖಂಡ್ರೆ ಮೊದಲಾದವರಿದ್ದರು.
ಕಲಬುರಗಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ (Siddaramaiah) ಜನಪ್ರಿಯತೆಯೇ ಹಾಗಿದೆ ಸ್ವಾಮಿ. ಅವರು ಕಲ್ಯಾಣ ಕರ್ನಾಟಕದಲ್ಲಿರಲಿ ಅಥವಾ ದಕ್ಷಿಣ; ಜನ ಅವರನ್ನು ಮುತ್ತಿಕೊಳ್ಳುತ್ತಾರೆ. ಪ್ರಸ್ತುತವಾಗಿ ಅವರು ಇತರ ಕೆಲ ನಾಯಕರೊಂದಿಗೆ ಉತ್ತರ ಕರ್ನಾಟಕದಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿದ್ದಾರೆ. ಜಿಲ್ಲೆಯ ಸೇಡಂ (Sedam) ಪಟ್ಟಣವನ್ನು ಅವರು ಕಳೆದ ರಾತ್ರಿ ತಲುಪಿದಾಗ ಉಂಟಾದ ನೂಕು ನುಗ್ಗಲು ನೋಡಿ. ಕಾರ್ಯಕರ್ತರು, ಬೆಂಬಲಿಗರು ಅವರನ್ನು ಕೆಳಗಿಳಿಯಲು ಸಹ ಬಿಡುತ್ತಿಲ್ಲ, ಸೆಲ್ಫೀಗಳಿಗಾಗಿ ಮುಗಿಬಿದ್ದಿದ್ದಾರೆ. ಸಿದ್ದರಾಮಯ್ಯನವರೊಂದಿಗೆ ಡಾ ಶರಣಪ್ರಕಾಶ್ ಪಾಟೀಲ್, ಜಮೀರ್ ಅಹ್ಮದ್ (Zameer Ahmed), ಈಶ್ವರ್ ಖಂಡ್ರೆ ಮೊದಲಾದವರಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 07, 2023 11:37 AM
Latest Videos