BBK Season 11: ಮನೆಯಿಂದ ಹೊರಬಿದ್ದ ರಜತ್​ರನ್ನು ಸುತ್ತುವರಿದ ಅಭಿಮಾನಿಗಳು, ಪಾರಾಗಿ ಹೋಗಿದ್ದೇ ಪವಾಡ

ಅರುಣ್​ ಕುಮಾರ್​ ಬೆಳ್ಳಿ

Updated on: Jan 27, 2025 | 1:15 PM

BBK Season 11: ಕನ್ನಡ ಬಿಗ್ ಬಾಸ್ ಸೀಸನ್ 11 ಗೆದ್ದ ಹನಮಂತ ಕೂಡ ಬಿಗ್ ಬಾಸ್ ಮನೆಗೆ ವೈಲ್ಡ್​ ಕಾರ್ಡ್ ಎಂಟ್ರಿ ಅನ್ನೋದು ವಿಶೇಷ. ಆದರೆ, ಸೀಸನ್ ಉದ್ದಕ್ಕೂ ಹನಮಂತ ಅಮಾಯಕ, ಮುಗ್ಧನ ಹಾಗೆ ಮನೇಲಿದ್ದರೆ, ರಜತ್ ಮನೆಗೆ ಬಂದ ಮೊದಲ ದಿನದಿಂದ ಡಾಮಿನೇಟಿಂಗ್ ಆಗಿದ್ದರು. ಅವರ ಮ್ಯಾನರಿಸಂ ನೋಡುತ್ತಿದ್ದರೆ ಸೀಸನ್ 10 ರ ಸ್ಪರ್ಧಿ ವಿನಯ್ ನೆನಪಾಗುತ್ತಿದ್ದರು.

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನಲ್ಲಿ ಹೀಗೆ ಪ್ರತಿಬಾರಿ ಆಗುತ್ತದೆ. ನಿರ್ದಿಷ್ಟ ಸ್ಪರ್ಧಿಯೇ ಗೆಲ್ಲುತ್ತಾರೆ ಅಂತ ಜನ ಅಂದುಕೊಂಡಿರುತ್ತಾರೆ, ಆದರೆ ಗೆಲ್ಲೋದು ಬೇರೊಬ್ಬರು. ಈ ಸಲ ವೈಲ್ಡ್​ ಕಾರ್ಡ್​ ಮೂಲಕ ಪ್ರವೇಶ ಗಿಟ್ಟಿಸಿದ್ದ ರಜತ್ ಗೆಲ್ಲುತ್ತಾರೆಂದು ಬಹಕಷ್ಟು ಜನ ಅಂದುಕೊಂಡಿದ್ದರು. ಅದರೆ ಗೆದ್ದಿದ್ದು ಹಾವೇರಿಯ ಹನಮಂತು. ರಜತ್ ಸೆಕೆಂಡ್ ರನ್ನರ್ ಅಪ್ ಆಗಿ ಮನೆಯಿಂದ ಹೊರಬಿದ್ದಾಗ ಅವರ ಕಾರನ್ನು ಅಭಿಮಾನಿಗಳು ಸುತ್ತುವರಿದು ಕಾರು ಮುಂದೆ ಹೋಗದಂಥ ಸನ್ನಿವೇಶ ಸೃಷ್ಟಿಯಾಗಿತ್ತು. ರಜತ್ ಬಹಳ ಕಷ್ಟಪಟ್ಟು ಅಲ್ಲಿಂದ ಹೋಗುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Bigg Boss Kannada Winner Hanumantha: ಬಿಗ್ ಬಾಸ್ ವಿನ್ನರ್ ಹನುಮಂತ  

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.