ಸುದೀಪ್ ಹಿಡಿದುಕೊಂಡ ಹನುಮಂತನ ಕೈಗೆ ಭಾರೀ ಬೇಡಿಕೆ; ಅಭಿಮಾನಿಗಳು ಮಾಡ್ತಿರೋದೇನು?
ಹನುಮಂತ ಅವರ ಖ್ಯಾತಿ ಹೆಚ್ಚಾಗಿದೆ. ಸುದೀಪ್ ಅವರು ಹನುಮಂತನ ಕೈ ಎತ್ತುವ ಮೂಲಕ ವಿನ್ನರ್ ಎಂದು ಘೋಷಣೆ ಮಾಡಿದರು. ಹನುಮಂತ ಈ ವಿಚಾರಕ್ಕೆ ಸಾಕಷ್ಟು ಖುಷಿಪಟ್ಟಿದ್ದಾರೆ. ಈಗ ಅವರು ಒಂದು ಅಚ್ಚರಿಯ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಹನುಮಂತ ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದವರು. ಅವರ ಬದುಕನ್ನು ಬಿಗ್ ಬಾಸ್ ಬದಲಿಸಿದೆ. ಈಗ ಬರೋ ಅಭಿಮಾನಿಗಳು ಹನುಮಂತ ಅವರ ಎಡಗೈಗೆ ಮುತ್ತು ಕೊಡುತ್ತಾ ಇದ್ದಾರಂತೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ. ಬಿಗ್ ಬಾಸ್ ವಿನ್ನರ್ ಘೋಷಿಸುವಾಗ ಸುದೀಪ್ ಅವರು ಹನುಮಂತ ಅವರ ಕೈಯನ್ನು ಹಿಡಿದುಕೊಂಡಿದ್ದರು. ಹೀಗಾಗಿ, ಅದೇ ಕೈಗೆ ಮುತ್ತು ಕೊಡೋ ಕೆಲಸವನ್ನು ಫ್ಯಾನ್ಸ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.