Cycle mechanic builds paramotor glider: ಪೈಲಟ್ ಆಗುವ ಆಸೆ ಹೊತ್ತಿದ್ದ ಹರ್ಪ್ರೀತ್ ಸಿಂಗ್ ಪ್ಯಾರಾ-ಮೋಟಾರ್ ಗ್ಲೈಡರ್ ತಯಾರಿಸಿ ಹಾರುವ ಕನಸು ಈಡೇರಿಸಿಕೊಂಡರು!
ಹರ್ಪ್ರೀತ್ ಸಿಂಗ್ಎಲ್ಲಿರುವ ತಾಂತ್ರಿಕ ಮತ್ತು ಯಾಂತ್ರಿಕ ನೈಪುಣ್ಯತೆಯಿಂದ ಪ್ರಭಾವಕ್ಕೊಳಗಾಗಿರುವ ಪುದಚೆರಿಯ ಇಂಡಿಯನ್ ಫ್ಲೈಯಿಂಗ್ ಫೋರ್ಸ್ ಹೆಸರಿನ ಅಡ್ವೆಂಚರ್ ಸ್ಪೋರ್ಟ್ಸ್ ಕಂಪನಿಯು ಇನ್ಸ್ಟ್ರಕ್ಟರ್ ನೌಕರಿಯನ್ನು ನೀಡಿದೆ.
ಫರೀದ್ಕೋಟ್ (ಪಂಜಾಬ್): ವಿಡಿಯೋದಲ್ಲಿ ಕಾಣುವ ಪಂಜಾಬ್ ಫರೀದ್ ಕೋಟ್ ನಿವಾಸಿ ಹರ್ಪ್ರೀತ್ ಸಿಂಗ್ (Harpreet Singh) ಬಾಲ್ಯದಲ್ಲಿ ಒಬ್ಬ ಪೈಲಟ್ ಆಗುವ ಕನಸು ಕಾಣುತ್ತಿದ್ದರು. ಆದರೆ ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಅವರಿಗೆ ಹದಗೆಟ್ಟ ಕುಟುಂಬದ ಆರ್ಥಿಕ ಸ್ಥಿತಿಯೊಂದಿಗೆ ಏಗಲು ಸೈಕಲ್ ಮೆಕ್ಯಾನಿಕ್ (cycle mechanic) ಆಗಬೇಕಾಯಿತು. ಆದರೆ ಹರ್ಪ್ರೀತ್ ತಮ್ಮ ಕನಸಿನಿಂದ ಮಾತ್ರ ವಿಮುಖರಾಗಿರಲಿಲ್ಲ. ಅಸ್ಸಾಂನಲ್ಲಿ ಸೇನಾ ತರಬೇತಿ ಕೇಂದ್ರದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಲ್ಲಿ ಸಫಲರಾದ ಹರ್ಪ್ರೀತ್ ಸಿಂಗ್ ತಾವೇ ಒಂದು ಪ್ಯಾರಾ-ಮೋಟಾರ್ ಗ್ಲೈಡರ್ (paramotor glider ) ನಿರ್ಮಿಸಿದರು.
ಇದನ್ನೂ ಓದಿ: Tamannah Bhatia: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಶ್ಮಿಕಾ ಮಂದಣ್ಣ-ತಮನ್ನಾ ಭಾಟಿಯಾ ಡ್ಯಾನ್ಸ್ ಪ್ರ್ಯಾಕ್ಟೀಸ್: ವಿಡಿಯೋ
‘ಬೈಕ್ ಎಂಜಿನೊಂದನ್ನು ನಾನು ಇದರಲ್ಲಿ ಉಪಯೋಗಿಸಿದ್ದೇನೆ ಮತ್ತು ಒಂದು ಪ್ಯಾರಾ ಗ್ಲೈಡರನ್ನು ವಿದೇಶದಿಂದ ತರಿಸಿಕೊಂಡಿದ್ದೇನೆ. ನಾನು ತಯಾರಿಸಿರುವ ಪ್ಯಾರಾಮೋಟರ್ ಗ್ಲೈಡರ್ ನಲ್ಲಿ ಎಂಜಿನ್ ಮತ್ತು ಗ್ಲೈಡರನ್ನು ಮೇಲೆತ್ತಿ ಹಾರಲು ನೆರವಾಗುವ ಪ್ರೊಪೆಲ್ಲರ್ ಬಳಕೆಯಾಗಿವೆ.ಇದನ್ನು ತಯಾರಿಸಲು ಯಾರದೇ ಸಹಾಯವನ್ನು ನಾನು ಪಡೆದಿಲ್ಲ. ಇಡೀ ಯತ್ರವನ್ನು ಏಕಾಂಗಿಯಾಗಿ ತಯಾರಿಸಿದ್ದೇನೆ,’ ಎಂದು ಹರ್ಪ್ರೀತ್ ಸಿಂಗ್ ಹೇಳುತ್ತಾರೆ.
ಪ್ಯಾರಾ-ಮೋಟರ್ ಗ್ಲೈಡರ್ ತಯಾರಿಸಲು ಹರ್ಪ್ರೀತ್ ಗೆ ಮೂರು ವರ್ಷ ಸಮಯ ಬೇಕಾಯಿತು ಮತ್ತು ಅದಕ್ಕೆ ತಗುಲಿದ ವೆಚ್ಚ ರೂ. 2.5 ಲಕ್ಷ. ಫರೀದ್ ಕೋಟ್ ನಗರದಲ್ಲಿ ಇಂಥದೊಂದು ಸಾಧನೆ ಮಾಡಿರುವ ಏಕೈಕ ವ್ಯಕ್ತಿ ತಾನು ಅಂತ ಹರ್ಪ್ರೀತ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
‘ನನಗೆ ಬಹಳ ಸಂತೋಷವಾಗಿದೆ. ನನ್ನ ಕನಸನ್ನು ಈಡೇರಿಸಿಕೊಂಡಿದ್ದೇನೆ. ಭಾರತದ ಉದ್ದಗಲಕ್ಕೆ ನಾನು ಹಾರಾಡಿದ್ದೇನೆ,’ ಎಂದು ಹರ್ಪ್ರೀತ್ ಹೇಳುತ್ತಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡ: ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳಕ್ಕೆ ಮತ್ತೆ ನಿಷೇಧದ ತೂಗುಕತ್ತಿ, ಜಿಲ್ಲಾ ಪಶುಸಂಗೋಪನಾ ಇಲಾಖೆಯಿಂದ ನೋಟಿಸ್
ಅವರಲ್ಲಿರುವ ತಾಂತ್ರಿಕ ಮತ್ತು ಯಾಂತ್ರಿಕ ನೈಪುಣ್ಯತೆಯಿಂದ ಪ್ರಭಾವಕ್ಕೊಳಗಾಗಿರುವ ಪುದಚೆರಿಯ ಇಂಡಿಯನ್ ಫ್ಲೈಯಿಂಗ್ ಫೋರ್ಸ್ ಹೆಸರಿನ ಅಡ್ವೆಂಚರ್ ಸ್ಪೋರ್ಟ್ಸ್ ಕಂಪನಿಯು ಇನ್ಸ್ಟ್ರಕ್ಟರ್ ನೌಕರಿಯನ್ನು ನೀಡಿದೆ.
ಇಬ್ಬರನ್ನು ಹೊತ್ತು ಹಾರುವ ಸಾಮರ್ಥ್ಯದ ಪ್ಯಾರಾಗ್ಲೈಡರ್ ನಿರ್ಮಿಸುವುದು ಹರ್ಪ್ರೀತ್ ಅವರ ಮುಂದಿನ ಗುರಿಯಾಗಿದೆ. ತಮ್ಮ ಕಷ್ಟಕಾಲದಲ್ಲಿ ನೆರವಾದ ಸ್ನೇಹಿತರನ್ನು ಜೊತೆಗೆ ಕರೆದುಕೊಂಡು ಹಾರುವ ಇಚ್ಛೆ ಅವರಲ್ಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ