Karnataka Assembly Polls; ಗೋಪಾಲಯ್ಯ ಮತ್ತು ಭೈರತಿ ಬಸವರಾಜ ರಾಜೀನಾಮೆ ಸಲ್ಲಿಸುವ ವದಂತಿ ಶುದ್ಧ ಸುಳ್ಳು: ಪ್ರಲ್ಹಾದ್ ಜೋಶಿ
ಬಾಲಕೃಷ್ಣ ಅವರು ವೈಯಕ್ತಿಕ ಕಾರಂಗಳಿಂದಾಗಿ ರಾಜೀನಾಮೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೇಳಿದರು.
ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು (Pralhad Joshi) ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿರುವ ಕೆ ಗೋಪಾಲಯ್ಯ (K Gopalaiah) ಮತ್ತು ಭೈರತಿ ಬಸವರಾಜ (Byrathi Basavaraj ) ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ವದಂತಿ ಸುಳ್ಳು, ಕೇವಲ ಎನ್ ವೈ ಬಾಲಕೃಷ್ಣ ಮಾತ್ರ ಶಾಸಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಗೋಪಾಲಯ್ಯ ಮತ್ತು ಭೈರತಿ ಬಸವರಾಜ ಇಬ್ಬರೂ ತಮ್ಮ ಸಂಪರ್ಕದಲ್ಲಿದ್ದಾರೆ, ಅವರಿಬ್ಬರು ರಾಜೀನಾಮೆ ಸಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು. ಬಾಲಕೃಷ್ಣ ಅವರು ವೈಯಕ್ತಿಕ ಕಾರಂಗಳಿಂದಾಗಿ ರಾಜೀನಾಮೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos